ಐಪಿಎಲ್ 2022 ರ ಇದುವರೆಗಿನ ಏಳು ಪಂದ್ಯಗಳಲ್ಲಿ ಆರ್ಸಿಬಿ ಮಾಜಿ ನಾಯಕ ಮತ್ತು ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಪ್ರದರ್ಶನವು ಮಿಶ್ರವಾಗಿದೆ. ಈ ಲೀಗ್ನ 31 ನೇ ಪಂದ್ಯದಲ್ಲಿ ಅವರು ಲಖನೌ ವಿರುದ್ಧ ಗೋಲ್ಡನ್ ಡಕ್ ಗೆ ಔಟಾದರು. ವೇಗದ ಬೌಲರ್ ದುಷ್ಮಂತ ಚಮೀರ ಎಸೆತದಲ್ಲಿ ಕೊಹ್ಲಿ ದೀಪಕ್ ಹೂಡಾಗೆ ಕ್ಯಾಚ್ ನೀಡಿದರು. ಈ ಪಂದ್ಯದಲ್ಲಿ ಕೊಹ್ಲಿ ಸೊನ್ನೆ ಸುತ್ತಿದರು. ಕಳೆದ ಏಳು ಪಂದ್ಯಗಳಲ್ಲಿ ಕೊಹ್ಲಿ 41*,12, 5, 48, 1, 12, 0 ರನ್ ಗಳಿಸಿದ್ದಾರೆ. ಅಂದಹಾಗೆ, ಇದುವರೆಗೆ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ನಾಲ್ಕು ಬಾರಿ ಗೋಲ್ಡನ್ ಡಕ್ಗೆ ಔಟಾಗಿದ್ದಾರೆ. ಒಟ್ಟಾರೆ ಈ ಲೀಗ್ನಲ್ಲಿ 7 ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.
ಲಖನೌ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಗೋಲ್ಡನ್ ಡಕ್ಗೆ ಔಟಾದರು. ಆದರೆ ಈ ಲೀಗ್ನಲ್ಲಿ ಈ ಹಿಂದೆ ಮೂರು ಬಾರಿ ಅವರು ಈ ರೀತಿ ಔಟ್ ಆಗಿದ್ದಾರೆ. 2008 ರಲ್ಲಿ, ಆಶಿಶ್ ನೆಹ್ರಾ, 2014 ರಲ್ಲಿ ಸಂದೀಪ್ ಶರ್ಮಾ ಈ ರೀತಿಯಲ್ಲಿ ಔಟ್ ಮಾಡಿದ್ದರು. ಇದರ ನಂತರ, 2017 ರಲ್ಲಿ, ನಾಥನ್ ಕೌಲ್ಟರ್-ನೈಲ್ ಅವರನ್ನು ಗೋಲ್ಡನ್ ಡಕ್ಗಾಗಿ ಔಟ್ ಮಾಡಿದರು.
ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್ ಡಕ್
ವಿರುದ್ಧ ಎಂಐ ಬೆಂಗಳೂರು, 2008 (ಆಶಿಶ್ ನೆಹ್ರಾ)
Vs PBKS ಬೆಂಗಳೂರು, 2014 (ಸಂದೀಪ್ ಶರ್ಮಾ)
Vs KKR ಕೋಲ್ಕತ್ತಾ, 2017 (ನಾಥನ್ ಕೌಲ್ಟರ್-ನೈಲ್)
Vs LSG ಮುಂಬೈ, DYP 2022 (ದುಷ್ಮಂತ ಚಮೀರ)
ಐಪಿಎಲ್ನ ಈ ಋತುವಿನ ಪವರ್ಪ್ಲೇನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನದ ನೀರಸವಾಗಿದೆ. ಈ ಋತುವಿನಲ್ಲಿ ಅವರು ಪವರ್ಪ್ಲೇಗಳಲ್ಲಿ ಆಡಿದ ನಾಲ್ಕು ಇನ್ನಿಂಗ್ಸ್ಗಳಲ್ಲಿ ಮೂರು ಬಾರಿ ಔಟಾಗಿದ್ದಾರೆ. ಮತ್ತು 8.33 ರ ಸರಾಸರಿಯಲ್ಲಿ ಮತ್ತು 108.69 ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 25 ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ಅವರು 7 ಪಂದ್ಯಗಳಲ್ಲಿ 19.83 ರ ಸರಳ ಸರಾಸರಿ ಮತ್ತು 123.96 ಸ್ಟ್ರೈಕ್ ರೇಟ್ನಲ್ಲಿ ಕೇವಲ 119 ರನ್ ಗಳಿಸಿದ್ದಾರೆ. ಇದುವರೆಗಿನ ಅವರ ಉತ್ತಮ ಸ್ಕೋರ್ 48 ರನ್ ಆಗಿದೆ.