ವಿರಾಟ್ ಕೊಹ್ಲಿ ಬ್ಯಾಟ್ ನಿಂದ ಶತಕ ಸಿಡಿಯುತ್ತಿಲ್ಲ ಅನ್ನುವುದು ಹೊಸ ಮಾತಲ್ಲ. ಕ್ರಿಕೆಟ್ ಪ್ರಿಯರಿಗೆ ಅದು ಮಾಮೂಲು ಅನ್ನುವ ಹಾಗಾಗಿದೆ. ಆದರೆ ಕಳೆದ ಎರಡೂ ವರ್ಷಗಳಲ್ಲಿ ವಿರಾಟ್ ಶತಕಗಳಿಸಿಲ್ಲ ಅನ್ನುವುದು ಅಚ್ಚರಿಯ ವಿಷಯ. ಅಷ್ಟೇ ಅಲ್ಲ ಯಾವುದೇ ಫಾರ್ಮೆಟ್ ನಲ್ಲೂ ವಿರಾಟ್ ಶತಕಗಳಿಸಿದೆ 100 ಪಂದ್ಯಗಳನ್ನು ಮುಗಿಸಿದ್ದಾರೆ…!
ವಿರಾಟ್ 2019ರ ನವೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧದ ಡೇ-ನೈಟ್ ಟೆಸ್ಟ್ ಮ್ಯಾಚ್ನಲ್ಲಿ ವಿರಾಟ್ ಕೊನೆಯ ಬಾರಿ ಶತಕ ಸಿಡಿಸಿದ್ದಾರೆ. ಅದಾದ ಮೇಲೆ ಕೊಹ್ಲಿ 17 ಟೆಸ್ಟ್, 21 ಏಕದಿನ, 25 ಅಂತರರಾಷ್ಟ್ರೀಯ ಟಿ20 ಹಾಗೂ 37 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಒಂದೇ ಒಂದು ಶತಕ ಸಿಡಿಸಿಲ್ಲ.
ಈ ಬಾರಿ ಐಪಿಎಲ್ನಲ್ಲಂತೂ ವಿರಾಟ್ ಅಟ್ಟರ್ ಫ್ಲಾಪ್ ಆಗಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ 19.83ರ ಸರಾಸರಿಯಲ್ಲಿ ಕೇವಲ 119 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲ 5 ವರ್ಷಗಳ ಬಳಿಕ ಮೊದಲ ಬಾರಿಗೆ ಐಪಿಎಲ್ ನಲ್ಲಿ ಡಕ್ ಔಟ್ ಆಗಿದ್ದಾರೆ. ಎರಡಂಕಿ ದಾಖಲಿಸಲು ಕೂಡ ವಿರಾಟ್ ಪರದಾಡುತ್ತಿರುವುದು ಸುಳ್ಳಲ್ಲ. ವಿವಿಧ ಟೂರ್ನಿ ಹಾಗೂ ಫಾರ್ಮೆಟ್ ನಲ್ಲಿ ವಿರಾಟ್ 100 ಇನಿಂಗ್ಸ್ಗಳನ್ನಾಡಿಯೂ ಒಂದೇ ಒಂದು ಶತಕ ಸಿಡಿಸಿಲ್ಲ ಅನ್ನುವುದು ವಿರಾಟ್ ಅವರ ದೀರ್ಘಕಾಲದ ವೈಫಲ್ಯ ಆಗಿದೆ.
ವಿರಾಟ್ ಕೊಹ್ಲಿ 2020 ಹಾಗೂ 2021ರ ಐಪಿಎಲ್ ಆವೃತ್ತಿಗಳಲ್ಲಿ 400+ ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದರು. 2020ರ ಐಪಿಎಲ್ನಲ್ಲಿ ಕೊಹ್ಲಿ 15 ಪಂದ್ಯಗಳನ್ನಾಡಿ 42.36ರ ಬ್ಯಾಟಿಂಗ್ ಸರಾಸರಿಯಲ್ಲಿ 466 ರನ್ ಬಾರಿಸಿದ್ದರು. ಇನ್ನು 2021ರ ಐಪಿಎಲ್ನಲ್ಲಿ 12 ಪಂದ್ಯಗಳನ್ನಾಡಿ 28.92ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಅರ್ಧಶತಕ ಸಹಿತ 405 ರನ್ ಗಳಿಸಿದ್ದರು.