ಸಚಿನ್ ದಾಖಲೆಯನ್ನು ಅಳಿಸಿ ಹಾಕಿದ ವಿರಾಟ್ ಕೊಹ್ಲಿ
ಅವಮಾನ, ಅಸಹನೆ, ವಿವಾದ, ಸಿಟ್ಟು, ಒತ್ತಡಗಳ ನಡುವೆಯೂ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
ಹೌದು, ವಿರಾಟ್ ಬರೆದಿರುವ ದಾಖಲೆ ಅಂತಿಂಥ ದಾಖಲೆಯಲ್ಲ. ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನೇ ಅಳಿಸಿ ಹಾಕಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿರಬಹುದು. ಆದ್ರೆ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ದಾಖಲಿಸಿ ಮಿಂಚು ಹರಿಸಿದ್ದಾರೆ.
63 ಎಸೆತಗಳಲ್ಲಿ ಕೇವಲ ಮೂರು ಬೌಂಡರಿಗಳ ಸಹಾಯದಿಂದ ವಿರಾಟ್ ಕೊಹ್ಲಿ ಆಕರ್ಷಕ 51 ರನ್ ದಾಖಲಿಸಿದ್ದರು.
ಈ ವೇಳೆ ವಿರಾಟ್ ಕೊಹ್ಲಿ ವಿದೇಶಿ ನೆಲದಲ್ಲಿ ಗರಿಷ್ಠ ರನ್ ದಾಖಲಿಸಿದ್ದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಸಚಿನ್ ತೆಂಡುಲ್ಕರ್ ಅವರ ಹೆಸರಿನಲ್ಲಿತ್ತು.
ವಿರಾಟ್ ಕೊಹ್ಲಿ 5068 ರನ್ ದಾಖಲಿಸಿದ್ರೆ, ಸಚಿನ್ ತೆಂಡುಲ್ಕರ್ 5065 ರನ್ ಗಳಿಸಿದ್ದರು.
ನಂತರ ಎಮ್.ಎಸ್. ಧೋನಿ 4520 ರನ್, ರಾಹುಲ್ ದ್ರಾವಿಡ್ 3998 ರನ್ ಹಾಗೂ ಸೌರವ್ ಗಂಗೂಲಿ 3468 ರನ್ ಗಳಿಸಿದ್ದಾರೆ.