ವಿರಾಟ್ ಕೊಹ್ಲಿ ಕೇವಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರವಲ್ಲ, ಟೀಮ್ ಇಂಡಿಯಾಕ್ಕೂ ಅದ್ಭುತ ಆಸ್ಥಿ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಂತೂ ವಿರಾಟ್ ಬೇಕೇ ಬೇಕು. ಅಭಿಮಾನಿಗಳಿಗೂ ವಿರಾಟ್ ಆಟ ಅಂದರೆ ಸಖತ್ ಇಷ್ಟ.
ಆದರೆ ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಖದರ್ ಕಳೆದುಕೊಂಡಿದ್ದಾರೆ. ಬ್ಯಾಟಿಂಗ್ನಲ್ಲಿ ರನ್ ಬಾರದೆ ಇರುವುದು ಕೇವಲ ಆರ್ಸಿಬಿ ಅಭಿಮಾನಿಗಳಿಗಷ್ಟೇ ಅಲ್ಲ, ಟೀಮ್ ಇಂಡಿಯಾದ ಅಭಿಮಾನಿಗಳಿಗೂ ಶಾಕ್ ಕೊಟ್ಟಿದೆ. ಕೊಹ್ಲಿ ರನ್ಗಾಗಿ ಒದ್ದಾಡುತ್ತಿರುವುದು ನೋಡುವುದಕ್ಕೂ ಕಷ್ಟವಾಗುತ್ತಿದೆ.
ಐಪಿಎಲ್ 15ನೇ ಸೀಸನ್ನಲ್ಲಿ ವಿರಾಟ್ 8 ಇನ್ನಿಂಗ್ಸ್ ಆಡಿದ್ದಾರೆ. ಆದರೆ ಗಳಿಸಿರುವುದು ಕೇವಲ 119 ರನ್. ಸರಾಸರಿ 15ಕ್ಕಿಂತಲೂ ಕೆಳಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಅಜೇಯ ಇನ್ನಿಂಗ್ಸ್ ಇರುವುದರಿಂದ ಸರಾಸರಿ ಡಬಲ್ ಡಿಜಿಟ್ ನಲ್ಲಿದೆ. ಕಳೆದ ಎಂಟು ಇನ್ನಿಂಗ್ಸ್ ಗಳಲ್ಲಿ ವಿರಾಟ್ 2 ಬಾರಿ ಮೊದಲ ಎಸೆತದಲ್ಲೇ ಔಟ್ ಆಗಿದ್ದಾರೆ. ಇನ್ನೆರಡು ಒಂದಂಕಿ ಸಾಧನೆಯ ಇನ್ನಿಂಗ್ಸ್ ಆಗಿದೆ. ನಾಲ್ಕು ಇನ್ನಿಂಗ್ಸ್ ಗಳಲ್ಲಿ ಎರಡಂಕಿ ಮುಟ್ಟಿದರೂ ದೊಡ್ಡ ರನ್ ಗಳಿಸಿಲ್ಲ.
2014ರ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ರನ್ಗಾಗಿ ಪರದಾಡಿದ್ದರು. ಆದರೆ ಅಲ್ಲಿಂದ ಇಲ್ಲಿ ತನಕ ವಿರಾಟ್ಗೆ ರನ್ ಬರ ಕಾಡಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದ ಹಾಗೇ ವಿರಾಟ್ ಸತತ ವೈಫಲ್ಯ ಕಾಡುತ್ತಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಐಪಿಎಲ್ 2022ರಲ್ಲಿ ವಿರಾಟ್
ಎದುರಾಳಿ ರನ್
- ಎಸ್ಆರ್ಎಚ್: 0
- ಲಖನೌ ಸೂಪರ್ ಕಿಂಗ್ಸ್: 0
- ಡೆಲ್ಲಿ ಕ್ಯಾಪಿಟಲ್ಸ್: 12
- ಮುಂಬೈ ಇಂಡಿಯನ್ಸ್: 48
- ರಾಜಸ್ಥಾನ ರಾಯಲ್ಸ್: 05
- ಕೊಲ್ಕತ್ತಾ ನೈಟ್ ರೈಡರ್ಸ್: 12
- ಪಂಜಾಬ್ ಕಿಂಗ್ಸ್: 41(ಅಜೇಯ)
- ಚೆನ್ನೈ ಸೂಪರ್ ಕಿಂಗ್ಸ್: 01