Virat Kohli Birthday ಕೇಕ್ ಕತ್ತರಿಸಿ ಹುಟ್ಟು ಹಬ್ಬ ಸಂಭ್ರಮಿಸಿದ ವಿರಾಟ್
ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವುದರ ಬಗ್ಗೆ ತಂಡದ ಕೇರಂ ಸ್ಪಿನ್ನರ್ ಆರ್.ಅಶ್ವಿನ್ ರಿವೀಲ್ ಮಾಡಿದ್ದಾರೆ.
34ನೇ ವಸಂತಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬವನ್ನು ಅಭ್ಯಾಸ ನಡೆಸುತ್ತಿದ್ದ ಮೆಲ್ಬೋರ್ನ್ ಮೈದಾನದ ಹೊರಗೆ ಸೆಲೆಬ್ರೇಟ್ ಮಾಡಿರುವುದಾಗಿ ತಿಳಿಸಿದ್ದಾರೆ.
ರಿಷಬ್ ತಂದಿದ್ದ ಕೇಕ್ ನಮಗೆಲ್ಲಾ ಸಿಕ್ಕಿತು. ಬಿಸಿಸಿಐನ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಕೇಕ್ ಕತ್ತರಿಸಿ ಆಚರಿಸಿದ್ದಾರೆ.
ಕಾಂಗರೂ ನಾಡಿನಲ್ಲಿರುವ ವಿರಾಟ್ ಕೊಹ್ಲಿ ಭಾರತಕ್ಕೆ 2ನೇ ಟಿ20 ವಿಶ್ವಕಪ್ ಗೆಲ್ಲಿಸಲು ಹೋರಾಟ ನಡೆಸುತ್ತಿದ್ದಾರೆ ಎಂದು ಬಿಸಿಸಿಐನ ಸೋಶಿಯಲ್ ಮೀಡಿಯಾ ಬರೆದಿದೆ.
ವಿರಾಟ್ ಕೊಹ್ಲಿ 477 ಅಂತಾರಾಷ್ಟ್ರೀಯ ಪಂದ್ಯಗಳಿಂದ 24,350 ರನ್ ಹೊಡೆದಿದ್ದಾರೆ. ವಿರಾಟ್ ತಮ್ಮ ಅಮೋಘ ಬ್ಯಾಟಿಂಗ್ ನೆರವಿನಿಂದ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅತಿ ಹೆಚ್ಚು ರನ್ ಹೊಡೆದ ಆರನೆ ಬ್ಯಾಟರ್ ಆಗಿದ್ದಾರೆ.71 ಶತಕಗಳನ್ನು ಸಿಡಿಸಿ ಆಸಿಸ್ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.
ಯಶಸ್ವಿ ಟೆಸ್ಟ್ ತಂಡದ ನಾಯಕನಾಗಿದ್ದ ವಿರಾಟ್ ಕೊಹ್ಲಿ 68 ಟೆಸ್ಟ್ ಪಂದ್ಯಗಳಿಂದ 40 ಪಂದ್ಯಗಳನ್ನು ಗೆದ್ದಿದ್ದಾರೆ. ಟಿ20ಯಲ್ಲಿ 105 ಇನ್ನಿಂಗ್ಸ್ ಗಳಿಂದ 3,932 ರನ್ ಗಳಿಸಿದ್ದಾರೆ,