Virat Birthday ಕೊಹ್ಲಿಗೆ ಶುಭಾಶಯ ಕೋರಿದ ಮ್ಯಾಕ್ಸ್ ವೆಲ್
ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿಗೆ ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಶುಕ್ರವಾರ ಅಫ್ಘಾನಿಸ್ತಾನ ವಿರುದ್ಧ 4 ರನ್ಗಳ ರೋಚಕ ಗೆಲುವಿನ ನಂತರ ಗ್ಲೇನ್ ಮ್ಯಾಕ್ಸವೆಲ್ ಮಾಧ್ಯಮಗಳ ಮೂಲಕ ಶುಭಾಶಯ ಕೋರಿದರು.
ನನ್ನ ಒಳ್ಳೆಯ ಸ್ನೇಹಿತರ ಪೈಕಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ವಿರಾಟ್ ಹ್ಯಾವ್ ಎ ಗ್ರೇಟ್ ಡೇ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಡುತ್ತಿರುವ ವಿರಾಟ್ ಕೊಹ್ಲಿ ಸದ್ಯ ಒಳ್ಳೆಯ ಫಾರ್ಮನಲ್ಲಿದ್ದು ಟೂರ್ನಿಯಲ್ಲಿ 220 ರನ್ ಹೊಡೆದು ಅತಿ ಹೆಚ್ಚು ರನ್ ಸಿಡಿಸಿದ ಬ್ಯಾಟರ್ ಎನಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಹೊತುಪಡಿಸಿ ಉಳಿದ ಪಂದ್ಯಗಳಲ್ಲಿ ಅಬ್ಬರಿಸಿದ್ದಾರೆ.
ಟೂರ್ನಿಯಲ್ಲಿ 3 ಅರ್ಧ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಒಟ್ಟು 144.73 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಭಾನುವಾರ ಜಿಂಬಾಬ್ವೆ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಾತ್ರ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ.