Vijay Mallya – Chris Gayle ವಿಜಯ್ ಮಲ್ಯ- ಕ್ರಿಸ್ ಗೇಲ್ ಭೇಟಿ.. Super friendship ಎಂದ ಮಲ್ಯ..!

ಸಾಲದ ಬಲೆಯೊಳಗೆ ಸಿಲುಕಿ ಭಾರತದಿಂದ ಓಡಿ ಹೋಗಿರುವ ವಿಜಯ್ ಮಲ್ಯ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಲುಕಿ ಒದ್ದಾಡುತ್ತಿದ್ರೂ ವಿಜಯ್ ಮಲ್ಯ ಮಾತ್ರ ವಿದೇಶದಲ್ಲಿ ಐಷಾರಾಮಿ ಜೀವನವನ್ನು ಸಾಗಿಸುತ್ತಿದ್ದಾರೆ.
ಇದೀಗ ವಿಜಯ್ ಮಲ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಆರ್ ಸಿಬಿಯ ಮಾಜಿ ಆಟಗಾರ, ಐಪಿಎಲ್ ನ ರನ್ ಮೇಷಿನ್ ಕ್ರಿಸ್ ಗೇಲ್ ಜೊತೆ ವಿಜಯ್ ಮಲ್ಯ ಅವರು ಕಾಣಿಸಿಕೊಂಡಿದ್ದಾರೆ.
ಹೌದು, ವಿಜಯ ಮಲ್ಯ ಅವರನ್ನು ಇತ್ತೀಚೆಗೆ ಕ್ರಿಸ್ ಗೇಲ್ ಅವರು ಭೇಟಿಯಾಗಿದ್ದಾರೆ. ಇವರಿಬ್ಬರ ಫೋಟೋವನ್ನು ವಿಜಯ್ ಮಲ್ಯ ಅವರು ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನನ್ನ ಉತ್ತಮ ಗೆಳೆಯ ಕ್ರಿಸ್ಟೋಫರ್ ಹೆನ್ರಿ ಗೇಲ್ ಅವರನ್ನು ಭೇಟಿಯಾಗಿದ್ದೇನೆ. ಯುನಿವರ್ಸಲ್ ಬಾಸ್ ಅಂತ ವಿಜಯ್ ಮಲ್ಯ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಆರ್ ಸಿಬಿಗೆ ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿದಾಗಿನಿಂದ ನನ್ನ ಉತ್ತಮ ಗೆಳೆಯ. ಅದ್ಭುತ ಆಟಗಾರ ಎಂದು ವಿಜಯ್ ಮಲ್ಯ ಅವರು ಕ್ರಿಸ್ ಗೇಲ್ ಅವರನ್ನು ಬಣ್ಣಿಸಿದ್ದಾರೆ. Vijay Mallya share a picture with ‘Universe Boss’ Chris Gayle

ಕ್ರಿಸ್ ಗೇಲ್ ಅವರು 2011ರಿಂದ 2017ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದಾರೆ. ಈ ಅವಧಿಯಲ್ಲಿ ಕ್ರಿಸ್ ಗೇಲ್ ಅವರು ಆರ್ ಸಿಬಿ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೆ ತಂಡದ ರನ್ ಮೆಷಿನ್ ಕೂಡ ಆಗಿದ್ದರು. ಆರ್ ಸಿಬಿ ಪರ 91 ಪಂದ್ಯಗಳನ್ನು ಆಡಿರುವ ಗೇಲ್, 43.29ರ ಸರಾಸರಿ ಹಾಗೂ 154.40 ಸ್ಟ್ರೈಕ್ ರೇಟ್ ನಲ್ಲಿ 3420 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಶತಕ ಹಾಗೂ 21 ಅರ್ಧಶತಕಗಳಿವೆ. ಅಲ್ಲದೆ ಗರಿಷ್ಠ 175 ರನ್ ದಾಖಲಿಸಿ ಐಪಿಎಲ್ ನಲ್ಲಿ ಇತಿಹಾಸವನ್ನೇ ಬರೆದಿದ್ದಾರೆ.
2018ರಿಂದ ಕ್ರಿಸ್ ಗೇಲ್ ಅವರು ಪಂಜಾಬ್ ಕಿಂಗ್ಸ್ ಪರ ಆಡಿದ್ದರು. ಆದ್ರೆ 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಕ್ರಿಸ್ ಗೇಲ್ ಅನ್ ಸೋಲ್ಡ್ ಆಗಿದ್ದರು.
ಇದೀಗ ಹಾಯಾಗಿ ಜೀವನ ಸಾಗಿಸುತ್ತಿರುವ ಕ್ರಿಸ್ ಗೇಲ್ ಬದುಕನ್ನು ತುಂಬಾನೇ ಎಂಜಾಯ್ ಮಾಡುತ್ತಿದ್ದಾರೆ. ಆದ್ರೆ ವಿಜಯ್ ಮಲ್ಯ ಅವರು ಕೂಡ ಬದುಕಿನಲ್ಲಿ ಎಷ್ಟೇ ಸಮಸ್ಯೆಗಳಿದ್ರೂ ಹಾಯಾಗಿ ಜೀವನ ಕಳೆಯುತ್ತಿದ್ದಾರೆ. ಆದ್ರೆ ಇವರಿಬ್ಬರು ಎಲ್ಲಿ ಭೇಟಿಯಾಗಿದ್ದರು ಎಂಬುದು ಮಾತ್ರ ಗೊತ್ತಾಗಿಲ್ಲ.