ವಾಸುಕಿ ಕೌಶಿಕ್ ಅವರ ಅತ್ಯುತಮ ಬೌಲಿಂಗ್ ದಾಳಿಯ ನೆರವಿನಿಂದ ಕರ್ನಾಟಕ ತಂಡ ಸಿಕ್ಕಿಂ ವಿರುದ್ಧ 6 ವಿಕೆಟ್‍ಗಳ ಗೆಲುವು ದಾಖಲಿಸಿದೆ.
ಕೋಲ್ಕತ್ತಾದ ಈಡನ್ ಮೈದಾನದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಕ್ಕಿಂ ತಂಡ 46.2 ಓವರ್‍ಗಳಲ್ಲಿ 117 ರನ್‍ಗಳಿಗೆ ಆಲೌಟ್ ಆಯಿತು. ಕರ್ನಾಟಕ 24.4 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 121 ರನ್ ಕಲೆ ಹಾಕಿತು.
ಸಿಕ್ಕಿಂ ತಂಡಕ್ಕೆ ಕರ್ನಾಟಕ ವೇಗಿ ಕೌಶಿಕ್ ಆಘಾತ ನೀಡಿದರು. ಅನ್ವೀಶ್ ಶರ್ಮಾ 1, ಪಂಕಜ್ ರಾವತ್ 6, ನೀಲೇಶ್ ಲಾಮಿಚಾನೆ 26, ಸುಮೀತ್ ಸಿಂಗ್ 42 ರನ್, ತಾಮಂಗ್ 13 ರನ್ ಗಳಿಸಿದರು. ವಾಸೂಕಿ ಕೌಶಿಕ್ 16ಕ್ಕೆ 3 ವಿಕೆಟ್, ಕೆ.ಗೌತಮ್ 24ಕ್ಕೆ 3, ಶ್ರೇಯಸ್ ಗೋಪಾಲ್ 37ಕ್ಕೆ 3 ವಿಕೆಟ್ ಪಡೆದರು.
ಕರ್ನಾಟಕ ಪರ ಮಯಾಂಕ್ ಅಗರ್‍ವಾಲ್ ಅಜೇಯ 54, ನಿಕಿನ್ ಜೋಸ್ ಅಜೇಯ 46 ರನ್, ಮನೀಶ್ ಪಾಂಡೆ 4, ಮನೋಜ್ ಭಂಡಾಜೆ 6, ಸಮರ್ಥ್ 4 ರನ ಗಳಿಸಿದರು. ಸಿಕ್ಕಿಂ ಪರ ತಮಾಂಗ್ 24ಕ್ಕೆ 3 ವಿಕೆಟ್ ಪಡೆದರು.