US Open: ಪ್ರೀ ಕ್ವಾರ್ಟರ್ ಫೈನಲ್ ಗೆ ನಡಾಲ್, ಮುಗುರಾಜ್ ಗೆ ಸೋಲು
ರಾಫೆಲ್ ನಡಾಲ್ ಅವರು ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕೆಟ್ ಅವರನ್ನು ಏಕಪಕ್ಷೀಯವಾಗಿ 6-0, 6-1, 7-5 ಸೆಟ್‌ಗಳಿಂದ ಸೋಲಿಸಿ ಯುಎಸ್ ಓಪನ್‌ನ ನಾಲ್ಕನೇ ಸುತ್ತಿಗೆ ಪ್ರವೇಶಿಸಿದರು.
ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ನಡಾಲ್ ಅವರ ಎರಡನೇ ಸುತ್ತಿನ ವಿಜಯದ ಸಮಯದಲ್ಲಿ ಅವರ ಸ್ವಂತ ರಾಕೆಟ್ ಅವರ ಮೂಗಿಗೆ ಬಡಿದ ಕಾರಣ ಗಾಯಗೊಂಡರು. ನಾಲ್ಕು ಬಾರಿಯ ಚಾಂಪಿಯನ್ ಮತ್ತು 22 ಗ್ರ್ಯಾನ್ ಸ್ಲಾಮ್ ವಿಜೇತ ನಡಾಲ್ ಅವರ ಗಾಯದಿಂದ ಚೇತರಿಸಿಕೊಂಡು ಮೈದಾನದಲ್ಲಿ ಅಮೋಘ ಆಟ ಆಡಿದರು. ಇದೀಗ ಅವರು ಅಮೆರಿಕದ ಫ್ರಾನ್ಸಿಸ್ ಟಿಯಾಫೊ ಅವರನ್ನು ಎದುರಿಸಲಿದ್ದಾರೆ.

ಆಂಡ್ರೇ ರುಬ್ಲೆವ್ 6-4, 2-6, 7-6, 6-4, ರಿಂದ ವಿಶ್ವದ 19ನೇ ಶ್ರೇಯಾಂಕದ ಡೆನಿಸ್ ಶಪೊವಾಲೊವ್ ಅವರನ್ನು ಸೋಲಿಸಿದರು. ಇವರು ಇದೀಗ ಏಳನೇ ಶ್ರೇಯಾಂಕದ ಕ್ಯಾಮರೂನ್ ನೊರಿ ಅವರನ್ನು ಎದುರಿಸಲಿದ್ದಾರೆ. ಕಾರ್ಲೋಸ್ ಅಲ್ಕರೆಜ್ ಪೀಟ್ ಸಾಂಪ್ರಾಸ್ ನಂತರ ಸತತ ಎರಡನೇ ಯುಎಸ್ ಓಪನ್‌ನಲ್ಲಿ ನಾಲ್ಕನೇ ಸುತ್ತನ್ನು ತಲುಪಿದ ಅತ್ಯಂತ ಕಿರಿಯ ಆಟಗಾರರಾದರು.
ಸಾಂಪ್ರಾಸ್ 1989 ಮತ್ತು 1990ರಲ್ಲಿ ಈ ಸಾಧನೆ ಮಾಡಿದ್ದರು. 19 ವರ್ಷ ವಯಸ್ಸಿನ ಅಲ್ಕಾರೆಜ್ 6.3, 6.3, 6.3 ರಿಂದ ಜೆನ್ಸನ್ ಬ್ರೂಕ್ಸ್ಬಿ ಅವರನ್ನು ಸೋಲಿಸಿದರು. ಇದೀಗ ಅವರು ಮರಿನ್ ಸಿಲಿಕ್ ಮತ್ತು ಡೇನಿಯಲ್ ಇವಾನ್ಸ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಜೆಸ್ಸಿಕಾ ಪೆಗುಲಾ ಅವರು ಕ್ವಾಲಿಫೈಯರ್ ಯುವಾನ್ ಯುವಿ ಅವರನ್ನು 6-2, 6-7, 6-0 ಸೆಟ್‌ಗಳಿಂದ ಸೋಲಿಸಿ ಯುಎಸ್ ಓಪನ್‌ನ ನಾಲ್ಕನೇ ಸುತ್ತಿಗೆ ಮೊದಲ ಬಾರಿಗೆ ಪ್ರವೇಶಿಸಿದರು. ಪೆಟ್ರಾ ಕ್ವಿಟೋವಾ 5-7, -6-3, 7-6 ರಿಂದ ಗಾರ್ಬೈನ್ ಮುಗುರುಜಾ ಅವರನ್ನು ಸೋಲಿಸಿದರು.
US Open, Rafael Nadal, Richard Gasquet