ಯುವ ವೇಗಿ ಉಮ್ರಾನ್ ಮಲ್ಲಿಕ್(4/28) ಹಾಗೂ ಅನುಭವಿ ಆಟಗಾರ ಭುವನೇಶ್ವರ್(3/22) ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಮಿಂಚಿದ ಸನ್ರೈಸರ್ಸ್ ಹೈದ್ರಾಬಾದ್ ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನ 151 ರನ್ಗಳಿಗೆ ಕಟ್ಟಿಹಾಕಿದೆ.
ಡಿವೈ ಪಾಟೀಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ರೈಸರ್ಸ್, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಪ್ರದರ್ಶಿಸಿದ ಹೈದ್ರಾಬಾದ್ ಬೌಲರ್ಗಳು ಪಂಜಾಬ್ ಕಿಂಗ್ಸ್ ತಂಡವನ್ನ 20 ಓವರ್ಗಳಲ್ಲಿ 151 ರನ್ಗಳಿಗೆ ಕಡಿವಾಣ ಹಾಕಿದರು. ಪಂಜಾಬ್ ಪರ ಲಿಯಾಮ್ ಲಿವಿಂಗ್ಸ್ಟೋನ್ 60) ಹಾಗೂ ಶಾರೂಕ್ ಖಾನ್(26) ರನ್ಗಳಿಸಿದರು.
ಉಮ್ರಾನ್-ಭುವಿ ದಾಳಿ:
ಸನ್ರೈಸರ್ಸ್ ಪರ ಉಮ್ರಾನ್ ಮಲ್ಲಿಕ್(4-1-28-4), ಭುವನೇಶ್ವರ್ ಕುಮಾರ್ (4-0-22-3) ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದರು. ಆರಂಭದಿಂದಲೇ ಮಿಂಚಿದ ಹೈದ್ರಾಬಾದ್ ಬೌಲರ್ಗಳು, ಎದುರಾಳಿ ಬ್ಯಾಟ್ಸ್ಮನ್ಗಳ ಆಟಕ್ಕೆ ಸಂಪೂರ್ಣ ಕಡಿವಾಣ ಹಾಕಿದರು. ಇವರಿಗೆ ಸಾಥ್ ನೀಡಿದ ನಟರಾಜನ್ ಹಾಗೂ ಜಗದೀಶನ್ ಸುಚಿತ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಆಸರೆಯಾದ ಲಿವಿಂಗ್ಸ್ಟೋನ್:
ಎಸ್ಆರ್ಎಚ್ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಲಿಯಾಮ್ ಲಿವಿಂಗ್ಸ್ಟೋನ್ ಆಸರೆಯಾದರು. ಜವಾಬ್ದಾರಿಯ ಆಟದ ಮೂಲಕ ಅಬ್ಬರಿಸಿದ ಲಿವಿಂಗ್ಸ್ಟೋನ್ 60 ರನ್(33 ಬಾಲ್, 5 ಬೌಂಡರಿ, 4 ಸಿಕ್ಸ್) ಮೂಲಕ ತಂಡದ ಮೊತ್ತವನ್ನ 150ರ ಗಡಿದಾಟಿಸಿದರು. ಇವರಿಗೆ ಶಾರೂಕ್ ಖಾನ್(26) ಹೊರತುಪಡಿಸಿ ಉಳಿದವರಿಗೆ ಉತ್ತಮ ಸಾಥ್ ಸಿಗಲಿಲ್ಲ.
ಪಂಜಾಬ್ ಬ್ಯಾಟಿಂಗ್ ಆಘಾತ:
ಇದಕ್ಕೂ ಮುನ್ನ ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ಆಘಾತ ಅನುಭವಿಸಿತು. ಮಯಂಕ್ ಅಗರ್ವಾಲ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದ ಶಿಖರ್ ಧವನ್(8), ಪ್ರಭ್ಸಿಮ್ರನ್ ಸಿಂಗ್(14), ಜಾನಿ ಬೈರ್ಸ್ಟೋವ್(12), ಜಿತೇಶ್ ಶರ್ಮ(11), ಒಡೆಯನ್ ಸ್ಮಿತ್(13) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ. ಕೆಳ ಕ್ರಮಾಂಕದಲ್ಲಿ ಬಂದ ಆಟಗಾರರು ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರು.