ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಆಸಿಫ್ ಖಾನ್(101*) ODI ಕ್ರಿಕೆಟ್‌ನಲ್ಲಿ ವೇಗದ ಶತಕ ದಾಖಲಿಸುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ.
ಕೀರ್ತಿಪುರ್‌ನಲ್ಲಿ ತ್ರಿಭುವನ್ ಯೂನಿವರ್ಸಿಟಿ ಇಂಟರ್ ನ್ಯಾಷಿನಲ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಕ್ರಿಕೆಟ್ ವರ್ಲ್ಡ್‌ಕಪ್ ಲೀಗ್-2 ಪಂದ್ಯದಲ್ಲಿ ನೇಪಾಳ ತಂಡದ ವಿರುದ್ಧದ ಪಂದ್ಯದಲ್ಲಿ ಆಸಿಫ್ ಖಾನ್ ಈ ದಾಖಲೆ ಬರೆದಿದ್ದಾರೆ. ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಅಸೊಸಿಯೇಟ್ ನೇಷನ್‌ನ ಮೊದಲ ಆಟಗಾರ ಎನಿಸಿದ್ದಾರೆ. 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆಸಿಫ್ ಖಾನ್, ಎದುರಾಳಿ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.
ಬೌಂಡರಿ ಹಾಗೂ ಸಿಕ್ಸ್‌ಗಳ ಮೂಲಕ ರನ್ ಮಳೆಯನ್ನೇ ಹರಿಸಿದ 33 ವರ್ಷದ ಆಸಿಫ್ ಖಾನ್, ಕೇವಲ 42 ಬಾಲ್‌ಗಳಲ್ಲಿ 4 ಬೌಂಡರಿ ಹಾಗೂ 11 ಸಿಕ್ಸ್‌ಗಳ ಮೂಲಕ ಅಜೇಯ 101* ರನ್‌ಗಳಿಸಿ ಮಿಂಚಿದರು. 248.48ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ಗಳಿಸಿದ ಆಸಿಫ್, ತಂಡದ ಮೊತ್ತವನ್ನ 310ರ ಗಡಿ ದಾಟುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ODIನಲ್ಲಿ ವೇಗದ ಶತಕಗಳು:
ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ದಾಖಲಿಸಿದ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ ಸೌತ್ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅಗ್ರ ಸ್ಥಾನದಲ್ಲಿದ್ದಾರೆ. 2015ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಎಬಿಡಿ ಕೇವಲ 31 ಬಾಲ್‌ಗಳಲ್ಲಿ ಶತಕ ದಾಖಲಿಸಿ ಮಿಂಚಿದ್ದರು. ಇದಾದ ನಂತರದಲ್ಲಿ ನ್ಯೂಜಿ಼ಲೆಂಡ್‌ನ ಕೋರೆ ಆಂಡರ್ಸನ್ 2ನೇ ಸ್ಥಾನದಲ್ಲಿದ್ದು, ವೆಸ್ಟ್ ಇಂಡೀಸ್ ವಿರುದ್ಧ 36 ಬಾಲ್‌ಗಳಲ್ಲಿ ಶತಕ ಬಾರಿಸಿದ್ದರು. ಇದಕ್ಕೂ ಮುನ್ನ ಪಾಕಿಸ್ತಾನ ಶಾಹಿದ್ ಅಫ್ರಿದಿ 1996ರಲ್ಲಿ ನೈರೋಬಿಯಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ವೇಗದ ಶತಕ ದಾಖಲಿಸಿದ್ದರು.
UAE v NEP, Asif Khan, Nepal, United Arab Emirates, ODI Cricket, Sports