ಇಂಡಿಯನ್ ಪ್ರೀಮಿಯರ್ ಲೀಗ್ನ ಇತಿಹಾಸದಲ್ಲಿ ಅನೇಕ ಆಟಗಾರರ ಲಕ್ ಈ ಲೀಗ್ ನಲ್ಲಿ ಕಾಣಿಸಿಕೊಂಡ ಬಳಿಕವೇ ಬದಲಾಗಿದೆ.
IPL 2022 ರ ಋತುವಿನಲ್ಲಿ ದೆಹಲಿ ವಿರುದ್ಧ IPL ಗೆ ಪದಾರ್ಪಣೆ ಮಾಡಿದ ತಿಲಕ್ ವರ್ಮಾ ಅವರು ತಮ್ಮ ಸೊಗಸಾದ ಆಟದಿಂದಲೇ ಅವರ ಕನಸುಗಳನ್ನು ನನಸಾಗಿಸಿಕೊಂಡ ಯುವ ಪ್ರತಿಭೆ.
ಯಾವುದೇ ಮನುಷ್ಯನಿಗೆ ಸ್ಫೂರ್ತಿ ನೀಡಲು ಅವರ ಕಥೆ ಸಾಕು. ಹೈದರಾಬಾದಿನಲ್ಲಿ ನೆಲೆಸಿರುವ ತಿಲಕರ ತಂದೆಯ ಬಳಿ ತರಬೇತಿಗೆ ನೀಡುವಷ್ಟು ಹಣವಿರಲಿಲ್ಲ. ‘ಇಚ್ಛೆ ಎಲ್ಲಿದೆಯೋ ಅಲ್ಲಿ ದಾರಿ ಇದೆ’ ಎಂದು ಹೇಳುತ್ತಾರಲ್ಲಾ ಈ ಮಾತು ತಿಲಕರ ಪಾಲಿಗೆ ನಿಜವಾಗಿದೆ. ಕೋಚ್ ಸಲಾಂ ಈ ಜವಾಬ್ದಾರಿಯನ್ನು ಹೊತ್ತುಕೊಂಡು ತಿಲಕ್ ತರಬೇತಿ ಆರಂಭಿಸಿದರು.
ಹಲವಾರು ಹೋರಾಟಗಳ ನಂತರ, ಅಂತಿಮವಾಗಿ ಆ ಕ್ಷಣವು ತಿಲಕ್ ಅವರ ಜೀವನದಲ್ಲಿ ಬಂದಿತು. ಅವರನ್ನು ಮುಂಬೈ ಐಪಿಎಲ್ ಮೆಗಾ ಹರಾಜಿನಲ್ಲಿ ಮೂಲ ಬೆಲೆಗಿಂತ 8.5 ಪಟ್ಟು ಹೆಚ್ಚು ಬೆಲೆಗೆ ಖರೀದಿಸಿತು. ಮುಂಬೈ ತಿಲಕ ಅವರನ್ನು 1.7 ಕೋಟಿಗೆ ಖರೀದಿಸಿತ್ತು.
ತಿಲಕ್ ಅವರು ಅಂಡರ್-19 ವಿಜೇತ ತಂಡದ ಭಾಗವಾಗಿದ್ದರು. ಒಂದು ಕಾಲದಲ್ಲಿ ಮುರಿದ ಬ್ಯಾಟ್ನೊಂದಿಗೆ ಬ್ಯಾಟಿಂಗ್ ಮಾಡುತ್ತಿದ್ದ ಕನಸುಗಾರ. ಗುರುವಿನ ಸರಿಯಾದ ಮಾರ್ಗದರ್ಶನದ ಫಲದಿಂದ ಇಂದು ಯುವ ಆಟಗಾರ ವಿಶ್ವದ ಶ್ರೀಮಂತ ಲೀಗ್ ನಲ್ಲಿ ತನ್ನ ಕ್ಷಮತೆಯನ್ನು ಸಾಬೀತು ಪಡೆಸಲು ತಯಾರಿ ನಡೆಸಿದ್ದಾರೆ. ಅವರು ಇತ್ತೀಚಿನ ಅಂಡರ್-19 ವಿಶ್ವಕಪ್ನ 6 ಪಂದ್ಯಗಳಲ್ಲಿ ಮೂರು ಬಾರಿ ಬ್ಯಾಟಿಂಗ್ ಮಾಡಿ, 86 ರನ್ ಗಳಿಸಿದರು. ಮತ್ತು ಅವರ ಗರಿಷ್ಠ ಸ್ಕೋರ್ 46 ರನ್. ವಿಜಯ್ ಹಜಾರೆ ಟ್ರೋಫಿಯಲ್ಲಿ ತಿಲಕ್ ವರ್ಮಾ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದರು. ಅವರು ಹೈದರಾಬಾದ್ ಪರ ಆಡುವಾಗ ದೆಹಲಿ ವಿರುದ್ಧ 139 ರನ್ ಗಳಿಸಿದರು.