ಟಿ20ಯಲ್ಲಿ ಟೀಮ್ಇಂಡಿಯಾಕ್ಕೆ ಹೊಸ ಹೊಸ ನಾಯಕರು ಸಿಗುತ್ತಿದ್ದಾರೆ. ಅಂದಹಾಗೇ ಟೀಮ್ ಇಂಡಿಯಾವನ್ನು ಟಿ20ಯಲ್ಲಿ ಇಲ್ಲಿ ತನಕ 9 ಆಟಗಾರರು ಮುನ್ನಡೆಸಿದ್ದಾರೆ. ಧೋನಿ, ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತು ಪಡಿಸಿದರೆ ಉಳಿದವರು ತಾತ್ಕಲಿಕ ನಾಯಕರಾಗಿದ್ದರು ಅನ್ನುವುದನ್ನು ಕೂಡ ಗಮನಿಸಬೇಕು.
ವೀರೇಂದ್ರ ಸೆಹ್ವಾಗ್- ಟೀಮ್ ಇಂಡಿಯಾವನ್ನು ಮೊತ್ತ ಮೊದಲ ಟಿ20 ಪಂದ್ಯದಲ್ಲಿ ಮುನ್ನಡೆಸಿದ್ದು ಡೆಲ್ಲಿ ಡ್ಯಾಷರ್ ವೀರೇಂದ್ರ ಸೆಹ್ವಾಗ್. ಆದರೆ ಒಂದು ಪಂದ್ಯಕ್ಕೆ ಸೆಹ್ವಾಗ್ ಟಿ20 ಕ್ಯಾಪ್ಟನ್ಸಿ ಮುಗಿದು ಹೋಗಿತ್ತು.
ಎಂ.ಎಸ್. ಧೋನಿ- ಟಿ20ಯಲ್ಲಿ ಟೀಮ್ಇಂಡಿಯಾವನ್ನು ಅತಿ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ಕೀರ್ತಿ ಧೋನಿ ಪಾಲಿನದ್ದು. ಧೋನಿ 7ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು.
ಸುರೇಶ್ ರೈನಾ: ರೈನಾ ಕೇವಲ 3 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು.
ಅಜಿಂಕ್ಯಾ ರಹಾನೆ: 2 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಟಿ20ಯಲ್ಲಿ ಮುನ್ನಡೆಸಿದ ಕೀರ್ತಿ ರಹಾನೆಯದ್ದು.
ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರಲ್ಲಿ ವಿರಾಟ್ಕೊಹ್ಲಿ ಇದ್ದಾರೆ. ವಿರಾಟ್ 50 ಟಿ20 ಪಂದ್ಯಗಳಲ್ಲಿ ಟೀಮ್ಇಂಡಿಯಾದ ನಾಯಕನಾಗಿದ್ದರು.
ರೋಹಿತ್ ಶರ್ಮಾ: ರೋಹಿತ್ ಸದ್ಯ ಟೀಮ್ ಇಂಡಿಯಾದ ಪರ್ಮನೆಂಟ್ ಕ್ಯಾಪ್ಟನ್. ಇಲ್ಲಿ ತನಕ 28 ಟಿ20 ಪಂದ್ಯಗಳಲ್ಲಿ ಹಿಟ್ ಮ್ಯಾನ್ ತಂಡ ಮುನ್ನಡೆಸಿದ್ದಾರೆ.
ಶಿಖರ್ ಧವನ್: ಧವನ್ಗೆ 3 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಟಿ20ಯಲ್ಲಿ ಮುನ್ನಡೆಸುವ ಅವಕಾಶ ಸಿಕ್ಕಿತ್ತು.
ರಿಷಬ್ ಪಂತ್: ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ 5 ಪಂದ್ಯಗಳಲ್ಲಿ ಭಾರತ ತಂಡದ ಚುಕ್ಕಾಣಿ ಹಿಡಿದಿದ್ದರು.