IPL 2022 – ಇದಕ್ಕೆಲ್ಲಾ…. ಆರ್ ಸಿಬಿ ನಾಯಕತ್ವ ತ್ಯಜಿಸಬೇಕಿತ್ತಾ ಮಿಸ್ಟರ್ ಕೊಹ್ಲಿ..?

ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂಟು ಅಂಟಿನ ಉಂಡೆ ಕರದಂಟಿನಂತೆ ಸಿಹಿಯಾಗಿದೆ.
ಕಳೆದ 15 ವರ್ಷಗಳಿಂದ ಆರ್ ಸಿಬಿ ತಂಡದ ಆಧಾರಸ್ತಂಭವಾಗಿರುವ ವಿರಾಟ್ ಕೊಹ್ಲಿಗೆ ಕಪ್ ಗೆಲ್ಲಲು ಆಗಲಿಲ್ಲ ಅನ್ನೋ ಕೊರಗು ಮತ್ತು ನಿರಾಸೆ ಇದ್ದೇ ಇದೆ.
ಆರ್ ಸಿಬಿ ತಂಡದ ಕಿರಿಯ ಆಟಗಾರನಾಗಿ ಕಾಣಿಸಿಕೊಂಡಿದ್ದ ಕೊಹ್ಲಿ ನಂತರ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು.
ಒಂದು ಕಡೆ ಟೀಮ್ ಇಂಡಿಯಾ ನಾಯಕತ್ವದ ಜವಾಬ್ದಾರಿ ಜೊತೆಗೆ ಆರ್ ಸಿಬಿ ತಂಡದ ಸಾರಥ್ಯ.. ಹೀಗೆ ವಿರಾಟ್ ಕೊಹ್ಲಿ ಅಭಿಮಾನಿಗಳ ಪಾಲಿಗೆ ಸ್ಪೂರ್ತಿಯ ಚಿಲುಮೆಯಾದ್ರು.
ಆದ್ರೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕನಾಗಿ ಯಶಸ್ವಿನ ಉತ್ತುಂಗಕ್ಕೇರಿದ್ರು. ಆದ್ರೆ ಐಸಿಸಿ ಕಪ್ ಗೆಲ್ಲಲಿಲ್ಲ ಅನ್ನೋ ಆರೋಪವನ್ನು ಕೇಳಬೇಕಾಯ್ತು. ಇದರ ಬೆನ್ನಲ್ಲೇ ಆರ್ ಸಿಬಿ ನಾಯಕನಾಗಿಯೂ ಪ್ರಶಸ್ತಿ ಗೆಲ್ಲಲು ವಿರಾಟ್ ಗೆ ಸಾಧ್ಯವಾಗಲಿಲ್ಲ. There is nothing to be shocked about’: Virat Kohli

ಹೀಗಾಗಿ ಅಭಿಮಾನಿಗಳ ನಿರೀಕ್ಷೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಅನ್ನೋ ನಿರಾಸೆ, ಬೇಸರ ಕೊಹ್ಲಿಯವರನ್ನು ಕಾಡುತ್ತಿತ್ತು. ಹೀಗಾಗಿಯೇ 2021ರ ಐಪಿಎಲ್ ಟೂರ್ನಿಯ ಮುಗಿದ ನಂತರ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.
ವಿರಾಟ್ ಕೊಹ್ಲಿಯವರ ಈ ನಿರ್ಧಾರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ ಕೂಡ ಸ್ಪಷ್ಟವಾದ ಕಾರಣವನ್ನು ನೀಡಲಿಲ್ಲ.
ಆದ್ರೆ ಇದೀಗ ವಿರಾಟ್ ಕೊಹ್ಲಿ ತಾನು ಯಾಕೆ ನಾಯಕತ್ವವನ್ನು ತ್ಯಜಿಸಿದ್ದೆ ಎಂಬುದಕ್ಕೆ ಕಾರಣಗಳನ್ನು ನೀಡಿದ್ದಾರೆ.
ನನ್ನ ಈ ನಿರ್ಧಾರದಿಂದ ಯಾರು ಶಾಕ್ ಆಗಬೇಕಿಲ್ಲ. ಯಾಕಂದ್ರೆ ನನ್ನ ನಿರ್ಧಾರ ಸ್ಪಷ್ಟವಾಗಿತ್ತು. ಯೋಚನೆ ಮಾಡಿಯೇ ನಾನು ನಿರ್ಧಾರ ತೆಗೆದುಕೊಂಡಿರುವುದು. ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಹಾಗೇ ನನ್ನ ಜವಾಬ್ದಾರಿಯನ್ನು ಕಮ್ಮಿ ಮಾಡಿಕೊಳ್ಳಬೇಕಿತ್ತು. ಅದಕ್ಕೆ ಈ ನಿರ್ಧಾರವನ್ನು ತೆಗೆದುಕೊಂಡಿರುವುದು ಅಂತ ಇಝಿಯಾಗಿಯೇ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
ನಾನು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಒಂದು ಸ್ಪಷ್ಟವಾದ ಉದ್ದೇಶವಿರುತ್ತದೆ. ನನ್ನ ನಿರ್ಧಾರ ಸ್ಪಷ್ಟವಾಗಿರುವಾಗ ನಾನು ಕಾಯುವುದಕ್ಕೆ ಇಷ್ಟಪಡಲ್ಲ. ನನಗೆ ಆಟದ ಗುಣಮಟ್ಟ ಮುಖ್ಯ. ಆ ನಿಟ್ಟಿನಲ್ಲಿ ನಾನು ನನ್ನ ನಿರ್ಧಾರವನ್ನು ಪ್ರಕಟಿಸಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆದ್ರೆ ವಿರಾಟ್ ಈ ನಿರ್ಧಾರ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ಇನ್ನೂ ಕೂಡ ಹೊಸ ನಾಯಕನನ್ನು ಆಯ್ಕೆ ಮಾಡಿಲ್ಲ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಆರ್ ಸಿಬಿ ತಂಡದ ಭವಿಷ್ಯ ಮತ್ತು ತನ್ನ ಆಟದ ಕಡೆಗೆ ಗಮನ ಹರಿಸಲು ನಾಯಕತ್ವದ ಒತ್ತಡ ಅಡ್ಡಿಯಾಗೋದು ಬೇಡ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಆದ್ರೆ ಅಭಿಮಾನಿಗಳಿಗೆ ಮಾತ್ರ ವಿರಾಟ್ ಕೊಹ್ಲಿ ನಿರ್ಧಾರ ಬೇಸರವನ್ನುಂಟು ಮಾಡಿದೆ.