ತಾರಾ ಶಟ್ಲರ್ ಲಕ್ಷ್ಯಸೇನ್ ಥಾಯ್ಲ್ಯಾಂಡ್ ಓಪನ್ ಟೂರ್ನಿಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಭಾರತದ ಹೋರಾಟ ಅಂತ್ಯವಾಗಿದೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ 21 ವರ್ಷದ ಲಕ್ಷ್ಯಸೇನ್ ಕಠಿಣ ಹೋರಾಟ ನೀಡಿ ಥಾಯ್ಲ್ಯಾಂಡ್ನ ಎರಡನೆ ಸೀಡ್ ಆಟಗಾರ ಕುನ್ಲಾವುಟ್ ವಿರುದ್ಧ ಸೋತರು.
ಲಕ್ಷ್ಯಸೇನ್ ಒಂದು ಗಂಟೆ 15 ನಿಮಿಷ ಹೋರಾಡಿ 21-13, 17-21, 13-21 ಅಂಕಗಳಿಂದ ಸೋತರು.
ಈ ಋತುವಿಲ್ಲಿ ಲಕ್ಷ್ಯಸೇನ್ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದರು. ಕಳೆದ ವಾರ ಇಂಡೋನೇಷ್ಯಾ ಮಾಸ್ಟರ್ಸ್ನಲ್ಲೂ ಕ್ವಾರ್ಟರ್ ಫೈನಲ್ನಲ್ಲಿ ಎಡವಿದ್ದರು.
ಈ ವರ್ಷ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ಲಕ್ಷ್ಯ ಸೇನ್ ಬಿಡಬ್ಲ್ಯುಎಫ್ ರಾಂಕಿಂಗ್ನಲ್ಲೂ ಕುಸಿತ ಕಂಡು 23ನೇ ಸ್ಥಾನದಲ್ಲಿದ್ದಾರೆ.
ಮೊದಲ ಸೆಟ್ನಲ್ಲ ಲಕ್ಷ್ಯಸೇನ್ ಕುನ್ಲಾವುಟ್ ವಿರುದ್ಧ 11-6 ಅಂಕಗಳ ಮುನ್ನಡೆ ಪಡೆದು ಮೊದಲ ಸೆಟ್ ಗೆದ್ದುಕೊಂಡರು.
ಎರಡನೆ ಸೆಟ್ನಲ್ಲಿ ಲಕ್ಷ್ಯಸೇನ್ 11-10 ಅಂಕಗಳಿಂದ ಮುನ್ನಡೆಯಲ್ಲಿದ್ದಾಗ ಕುನ್ಲಾವುಟ್ ನೇರ 4 ಅಂಕಗಳನ್ನು ಪಡೆದು ಗೆದ್ದರು.ಥಾಯ್ಲ್ಯಾಂಡ್ ಆಟಗಾರ ನೆರವಾಗಿ 4 ಅಂಕ ಪಡೆದು ಪಂದ್ಯವನ್ನು ಮೂರನೆ ಸೆಟ್ಗೆ ಕೊಂಡೊಯ್ದರು.
ಮೂರನೆ ಸೆಟ್ನಲ್ಲಿ ಪ್ರಾಬಲ್ಯ ಮೆರೆದ ಕುನ್ಲಾವುಟ್ 18-12 ಮುನ್ನಡೆ ಪಡೆದು ಸುಲಭವಾಗಿ ಗೆದ್ದು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದರು.