ಭಾರತದ ತಾರಾ ಶಟ್ಲರ್ ಲಕ್ಷ್ಯಸೇನ್ ಥೈಲ್ಯಾಂಡ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ನಲ್ಲಿ ಯುವ ಆಟಗಾರ ಲಕ್ಷ್ಯಸೇನ್ ಲಿಹಾಂಗ್ ಜುನ್ ಹೊ ವಿರುದ್ಧ 21-19, 21-11 ಅಂಕಗಳಿಂದ ಗೆದ್ದು ಸೆಮಿಫೈನಲ್ಗೆ ಲಗ್ಗೆ ಹಾಕಿದರು.
ಈ ಋತುವಿನಲ್ಲಿ ಮೊದಲ ಬಾರಿಗೆ ಲಕ್ಷ್ಯಸೇನ್ ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದಿದ್ದಾರೆ. ಇಂಡೋನೇಷ್ಯಾ ಮಾಸ್ಟರ್ಸ್ನಲ್ಲೂ ಲಕ್ಷ್ಯಸೇನ್ ಕ್ವಾರ್ಟರ್ ಪ್ರವೇಶಿಸಿದ್ದರು.
ಲಕ್ಷ್ಯಸೇನ್ ಉಪಾಂತ್ಯದಲ್ಲಿ ಚೀನಾದ ಗಾಂಗ್ಜು ಅಥವಾ ಕುನ್ಲವಾಟ್ ವಿತಿಸ್ದಾಮ್ ಅವರನ್ನು ಎದುರಿಸಲಿದ್ದಾರೆ.
ಮತ್ತೋರ್ವ ಯುವ ಆಟಗಾರ ಕಿರಣ್ ಜಾರ್ಜ್ ಕ್ವಾರ್ಟರ್ನಲ್ಲಿ ರನ್ಸ್ನ ತೊಮಾ ಜೂನಿಯರ್ ಪೋಪೊವ್ ವಿರುದ್ಧ 16-21, 17-21 ಅಂಕಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದರು.