ಒಂದು ಟೆಸ್ಟ್ ಪಂದ್ಯ ಆಡುವುದೇ ಲಕ್ಷಾಂತರ ಕ್ರಿಕೆಟರ್ಗಳ ಕನಸು. ಅಂತಹುದರಲ್ಲಿ 100 ಟೆಸ್ಟ್ ಪಂದ್ಯ ಆಡುವುದು ಅಂದರೆ ತಮಾಷೆ ಮಾತೇ ಅಲ್ಲ. ಟೀಮ್ ಇಂಡಿಯಾದಂತಹ ತಂಡದಲ್ಲಿ 100 ಟೆಸ್ಟ್ ಆಡುವುದು ಅಂದರೆ ಅದಕ್ಕಿರುವ ಮಹತ್ವವೇ ಬೇರೆ.
ವಿಶ್ವದಲ್ಲಿ ಹಲವು ಕ್ರಿಕೆಟಿಗರು 100ಕ್ಕೂ ಅಧಿಕ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಆದರೆ 100ನೇ ಟೆಸ್ಟ್ನಲ್ಲಿ ಶತಕಗಳಿಸಿದವರ ಸಂಖ್ಯೆ ಮಾತ್ರ ಕೇವಲ 9 ಮಾತ್ರ. ಸಚಿನ್, ಲಾರಾ, ಕೈಯಲ್ಲಿ ಸಾಧ್ಯವಾಗದ ದಾಖಲೆಗಳು ಅಂದರೆ 100ನೇ ಟೆಸ್ಟ್ನಲ್ಲಿ ಶತಕ ಬಾರಿಸುವುದು. ಅಂದಹಾಗೇ ಭಾರತದ ಯಾವ ಆಟಗಾರ ಕೂಡ 100ನೇ ಟೆಸ್ಟ್ನಲ್ಲಿ ಶತಕದ ಸಾಧನೆ ಮಾಡಿಲ್ಲ.
100ನೇ ಟೆಸ್ಟ್ನಲ್ಲಿ ಶತಕ ಬಾರಿಸಿದವರು
ಆಟಗಾರ ದೇಶ ರನ್
- ಕಾಲಿನ್ ಕೌಡ್ರೆ, ಇಂಗ್ಲೆಂಡ್ , 104 ರನ್
- ಜಾವೇದ್ ಮಿಯಾಂದಾದ್, ಪಾಕಿಸ್ತಾನ 145ರನ್
- ಗಾರ್ಡನ್ ಗ್ರೀನಿಡ್ಜ್ ವೆಸ್ಟ್ಇಂಡೀಸ್ 149ರನ್
- ಅಲೆಕ್ ಸ್ಟೀವರ್ಟ್ ಇಂಗ್ಲೆಂಡ್ 105ರನ್
- ಇಂಜಮಾಮ್ ಉಲ್ ಹಕ್ ಪಾಕಿಸ್ತಾನ 184ರನ್
- ರಿಕಿ ಪಾಂಟಿಂಗ್ ಆಸ್ಟ್ರೇಲಿಯಾ 120/143* ರನ್
- ಗ್ರೇಮ್ ಸ್ಮಿತ್ ದಕ್ಷಿಣ ಆಫ್ರಿಕಾ 131 ರನ್
- ಹಶೀಮ್ ಆಮ್ಲಾ ದಕ್ಷಿಣ ಆಫ್ರಿಕಾ 134 ರನ್
- ಜೋ ರೂಟ್ ಇಂಗ್ಲೆಂಡ್ 218 ರನ್