Tennis: ಕೊನೆಯ ಗ್ರ್ಯಾನ್ ಸ್ಲ್ಯಾಮ್ ನಲ್ಲಿ ಕೈಗೆಟಕದ ಪ್ರಶಸ್ತಿ: ಭಾವುಕರಾದ ಸಾನಿಯಾ
ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಕಳೆದ ಗ್ರ್ಯಾನ್ ಸ್ಲಾಮ್ ಫೈನಲ್ ಗೆಲ್ಲುವ ಕನಸು ಭಗ್ನಗೊಂಡಿತ್ತು. ಸಾನಿಯಾ (36) ಮತ್ತು ರೋಹನ್ ಬೋಪಣ್ಣ (42) ಜೋಡಿಯು ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಬ್ರೆಜಿಲ್ ಜೋಡಿ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮಾಟೋಸ್ ವಿರುದ್ಧ ಸೋತರು.
ಅಂತಿಮ ಪಂದ್ಯದ ನಂತರ, ಮೆಲ್ಬೋರ್ನ್‌ನ ರಾಡ್ ಲೇವರ್ ಅರೆನಾದಲ್ಲಿ ಭಾಷಣಕ್ಕೆ ಕರೆದಾಗ ಸಾನಿಯಾ ಕಣ್ಣೀರಿಟ್ಟರು. “ಇವು ಸಂತೋಷದ ಕಣ್ಣೀರು. ವೃತ್ತಿಜೀವನವು 18 ವರ್ಷಗಳ ಹಿಂದೆ ಮೆಲ್ಬೋರ್ನ್‌ನಲ್ಲಿ ಪ್ರಾರಂಭವಾಗಿತ್ತು. ಅದನ್ನು ಕೊನೆಗೊಳಿಸಲು ಮೆಲ್ಬೋರ್ನ್‌ಗಿಂತ ಉತ್ತಮವಾದ ಸ್ಥಳವಿಲ್ಲ. ನಾನು ಇಲ್ಲಿ ಮನೆಯಲ್ಲಿದ್ದೇನೆ ಎಂಬ ಭಾವನೆ ಮೂಡಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು” ಎಂದು ಸಾನಿಯಾ ತಿಳಿಸಿದ್ದಾರೆ.
ಡಬ್ಲ್ಯುಟಿಎ ವೃತ್ತಿಜೀವನದ ಕೊನೆಯ ಟೂರ್ನಿ
ಸಾನಿಯಾ ಮಿರ್ಜಾ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ವರ್ಷದ ಆರಂಭದಲ್ಲಿ, ಫೆಬ್ರವರಿ 19 ರಿಂದ ದುಬೈನಲ್ಲಿ ನಡೆಯಲಿರುವ WTA 1000 ಈವೆಂಟ್ ತನ್ನ ಕೊನೆಯ ಪಂದ್ಯಾವಳಿ ಎಂದು ಹೇಳಿದ್ದರು. ನಂತರ ಅವರು ನಿವೃತ್ತಿ ಹೊಂದುತ್ತಾರೆ.
— Sania Mirza (@MirzaSania) January 27, 2023
ಸಾನಿಯಾ ಮಿರ್ಜಾ ಸಹ ಆಟಗಾರ ರೋಹನ್ ಬೋಪಣ್ಣ ಅವರಿಗೆ ಧನ್ಯವಾದ ಹೇಳಿದ್ದಾರೆ. 14 ನೇ ವಯಸ್ಸಿನಲ್ಲಿ, ಅವರ ಮೊದಲ ಮಿಶ್ರ ಡಬಲ್ಸ್ ಪಾಲುದಾರ ಬೋಪಣ್ಣ ಎಂದು ಅವರು ಹೇಳಿದರು. ಅವರಿಬ್ಬರ ಕುಟುಂಬಗಳು ಮತ್ತು ಮಕ್ಕಳು ಕೂಡ ಅಂತಿಮ ಹಂತದಲ್ಲಿ ಹಾಜರಿದ್ದರು. ಆದರೆ, ಸಾನಿಯಾ ಪತಿ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಫೈನಲ್‌ನಲ್ಲಿ ಕಾಣಿಸಿಕೊಳ್ಳಲಿಲ್ಲ. “ನಿಮ್ಮ ಆಟದಿಂದ ದೇಶ ಮತ್ತು ವಿಶ್ವದ ಜನರನ್ನು ಇಷ್ಟು ವರ್ಷಗಳಿಂದ ಪ್ರೇರೇಪಿಸುವ ಕೆಲಸವನ್ನು ನೀವು ಮಾಡಿದ್ದೀರಿ. ಇದಕ್ಕಾಗಿ ಧನ್ಯವಾದಗಳು” ಎಂದು ಬೋಪಣ್ಣ ಸಾನಿಯಾ ಬಗ್ಗೆ ತಿಳಿಸಿದರು.
https://twitter.com/AustralianOpen/status/1618368011013947392?s=20&t=g18xY4S31NsHsOfjEDS6TQ
ಸಾನಿಯಾ ಮಿರ್ಜಾ ಅವರು ತಮ್ಮ ಜೊತೆಗಾರ್ತಿ ಅನಾ ಡ್ಯಾನಿಲಿನಾ ಅವರೊಂದಿಗೆ ಮಹಿಳೆಯರ ಡಬಲ್ಸ್‌ನ ಎರಡನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು. ಇಂಡೋ-ಕಜಕ್ 8ನೇ ಶ್ರೇಯಾಂಕದ ಜೋಡಿ 4-6, 6-4, 2-6 ರಲ್ಲಿ ಶ್ರೇಯಾಂಕ ರಹಿತ ಜೋಡಿಯಾದ ಬೆಲ್ಜಿಯಂನ ಅಲಿಸನ್ ವ್ಯಾನ್ ಯುಟ್ವಾಂಕ್ ಮತ್ತು ಉಕ್ರೇನ್‌ನ ಅನ್ಹೆಲಿನಾ ಕಲಿನಿನಾ ವಿರುದ್ಧ ಸೋತರು. ಈ ಹೋರಾಟ ಸುಮಾರು 2 ಗಂಟೆಗಳ ಕಾಲ ನಡೆಯಿತು.
Tennis star, Sania Mirza, Grand Slam, Rohan Bopanna