ಟಿ-20 ವಿಶ್ವಕಪ್‌ಗೆ ತಯಾರಾಗಲು ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದ ನಂತರ ಏಷ್ಯಾ ಕಪ್‌ಗಾಗಿ ಶ್ರೀಲಂಕಾ ಮತ್ತು ಜಿಂಬಾಬ್ವೆಗೆ ತೆರಳುವ ಸಾಧ್ಯತೆ ಇದೆ. ಅಲ್ಲದೆ, ಇಂಗ್ಲೆಂಡ್ ಜೊತೆಗಿನ ಟೆಸ್ಟ್ ಪಂದ್ಯದ ವೇಳೆ, ಇತರ ತಂಡವು ಐರ್ಲೆಂಡ್ ಪ್ರವಾಸಿಸಬಹುದು. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.
ಶ್ರೀಲಂಕಾ ವಿರುದ್ಧ ಸ್ವದೇಶಿ ಸರಣಿಯ ನಂತರ ಐಪಿಎಲ್ ಆರಂಭವಾಗಲಿದೆ. ಆಟಗಾರರು ಐಪಿಎಲ್‌ನಲ್ಲಿ ತೊಡಗಿಕೊಂಡಿರುತ್ತಾರೆ. ಐಪಿಎಲ್ ಮೇ ಕೊನೆಯ ವಾರದವರೆಗೆ ನಡೆಯಲಿದೆ. ಅದರ ನಂತರ ಜೂನ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈಗಾಗಲೇ ನಿರ್ಧರಿಸಿರುವ 5 ಟಿ-20 ಪಂದ್ಯಗಳ ಸರಣಿಯನ್ನು ಆಡಲಿದೆ. ಆ ಬಳಿಕ ನಿಗದಿತ ವೇಳಾಪಟ್ಟಿಯ ಪ್ರಕಾರ ಉಳಿದ ಟೆಸ್ಟ್ ಪಂದ್ಯಗಳು ಮತ್ತು 3 ಟಿ-20 ಪಂದ್ಯಗಳನ್ನು ಆಡಲು ತಂಡವು ಜುಲೈನಲ್ಲಿ ಇಂಗ್ಲೆಂಡ್‌ಗೆ ಹೋಗಬೇಕಾಗಿದೆ. ಪ್ರಸ್ತುತ ಭಾರತಕ್ಕೆ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಯಾವುದೇ ವೇಳಾಪಟ್ಟಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಈ ಮಧ್ಯೆ ಏಷ್ಯಾಕಪ್ ಜೊತೆಗೆ ಜಿಂಬಾಬ್ವೆ ಪ್ರವಾಸ ಕೈಗೊಳ್ಳಬಹುದು.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಟೀಮ್ ಇಂಡಿಯಾ ಜುಲೈನಲ್ಲಿ ಇಂಗ್ಲೆಂಡ್‌ನೊಂದಿಗೆ ಉಳಿದಿರುವ ಒಂದು ಟೆಸ್ಟ್ ಪಂದ್ಯದ ಸರಣಿಯನ್ನು ಆಡಲು ಇಂಗ್ಲೆಂಡ್‌ಗೆ ಹೋದಾಗ, ಭಾರತದ ಬಿ ತಂಡ ಅದೇ ಸಮಯದಲ್ಲಿ ಐರ್ಲೆಂಡ್‌ನೊಂದಿಗೆ ಟಿ-20 ಪಂದ್ಯವನ್ನು ಆಡಬಹುದು. ತಂಡ ಆಗಸ್ಟ್-ಸೆಪ್ಟೆಂಬರ್ ನಲ್ಲಿ ಜಿಂಬಾಬ್ವೆಗೆ ಭೇಟಿ ನೀಡಬಹುದು. ಅಲ್ಲದೆ, ಏಷ್ಯಾಕಪ್‌ನಲ್ಲಿಯೂ ಆಡಲು ತಂಡವು ಯುಎಇಗೆ ಹೋಗಬಹುದು, ಇದರಿಂದ ವಿಶ್ವಕಪ್‌ಗೆ ಮೊದಲು ಹೆಚ್ಚು ಹೆಚ್ಚು ಪಂದ್ಯಗಳನ್ನು ಆಡಬಹುದು ಮತ್ತು ತಂಡದ ಸಿದ್ಧತೆ ಉತ್ತಮವಾಗಿರುತ್ತದೆ.
ವಿಶ್ವಕಪ್‌ಗೆ ಆಟಗಾರರನ್ನು ಗುರುತಿಸಲಾಗಿದೆ ಎಂದು ವೆಸ್ಟ್ ಇಂಡೀಸ್ ಸರಣಿಯ ನಂತರ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಆದರೆ ವಿಶ್ವಕಪ್‌ಗೂ ಮುನ್ನ ಆಟಗಾರರ ದಂಡು ಸಿದ್ಧವಾಗಬೇಕು, ನಮಗೆ ಬೆಂಚ್ ಸ್ಟ್ರೆಂತ್ ಇರಬೇಕೆಂದು ಅವರು ಬಯಸುತ್ತಾರೆ. ಅದಕ್ಕಾಗಿಯೇ ಅವರು ಹೆಚ್ಚು ಹೆಚ್ಚು ಯುವ ಆಟಗಾರರಿಗೆ ಅವಕಾಶಗಳನ್ನು ನೀಡುತ್ತಿದ್ದಾರೆ.