ಟೀಮ್ ಇಂಡಿಯಾದ ಪ್ರದರ್ಶನ ಕೆಲವರಿಗೆ ಸಹಿಸಲು ಆಗುತ್ತಿಲ್ಲವೇ ? ಒಳ್ಳೆಯ ಪ್ರದರ್ಶನ ನೀಡುತ್ತಿರುವ ರೋಹಿತ್ ಪಡೆ ಟಾರ್ಗೆಟ್ ಆಯಿತಾ ಎನ್ನುವ ಪ್ರಶ್ನೆ ಇದೀಗ ಕಾಡ ತೊಡಗಿದೆ.
ಗುರುವಾರ ಐರ್ಲೆಂಡ್ ವಿರುದ್ಧದ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಸಮಸ್ಯೆಗಳು ಶುರುವಾಗಿವೆ.
ಅ.27ರಂದು ಭಾರತ ಕ್ರಿಕೆಟ್ ಶಿಶು ನೆದರ್ಲ್ಯಾಂಡ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಈ ಪಂದ್ಯಕ್ಕೆ ಸಜ್ಜಾಗಲು ಭಾರತ ತಂಡಕ್ಕೆ ವ್ಯವಸ್ಥೆ ಕೊಟ್ಟಿಲ್ಲ. ಅಭ್ಯಾಸ ಮಾಡಬೇಕಿದ್ದ ರೋಹಿತ್ ಪಡೆಗೆ ಹೋಟೇಲ್ನಿಂದ 42 ಕಿ.ಮೀ. ದೂರದಲ್ಲಿ ಅಭ್ಯಾಸ ಮಾಡಲು ಅವಕಾಶ ನೀಡಲಾಗಿದೆ.
ಸಾಮಾನ್ಯವಾಗಿ ಕ್ರೀಡಾಂಗಣದ ಸುತ್ತಮುತ್ತ ಅಭ್ಯಾಸ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ಇಲ್ಲಿ ಟೀಮ್ ಇಂಡಿಯಾಗೆ ಅಭ್ಯಾಸಕ್ಕೆ ಹೋಗಲು 42ಕಿ.ಮೀ. ದೂರ ಪ್ರಯಾಣಿಸಬೇಕಿತ್ತು. ಇದು ಆಟಗಾರರನ್ನು ಆಯಾಸಕ್ಕೆ ದೂಡಲ್ಪಡುತ್ತದೆ. ಅಲ್ಲದೇ ಆಟಗಾರರ ಪ್ರದರ್ಶನದ ಮೇಲೂ ಪರಿಣಾಮ ಬೀಳುತ್ತದೆ. ತಂಡದ ಮಂಡಳಿ ಐಸಿಸಿಗೆ ದೂರು ನೀಡಿದೆ.

ಬರೀ ಈ ವಿಚಾರದಲ್ಲಿ ಆಗಿದ್ದರೆ ಸುಮ್ಮಾನಾಗಬಹುದಿತ್ತು. ಮಂಗಳವಾರ ಊಟಕ್ಕಾಗಿ ಹೋಟೆಲ್ಗೆ ಹೋದರೆ ಅಲ್ಲಿ ಕೂಡ ಆಟಗಾರರ ಕಡೆಗಣಿಸಲಾಗಿದೆ. ತಣ್ಣನೆಯ ಸ್ಯಾಂಡ್ ವಿಚ್ ನೀಡಿ ನಿರ್ಲಕ್ಷಿಸಲಾಗಿದೆ. ನಂತರ ಆಟಗಾರರು ಹಣ್ಣುಗಳನ್ನು ತಿಂದು ಸುಮ್ಮಾನದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಕೂಡ ಭಾರತ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ನೀಡಿದೆ. ದೊಡ್ಡ ಟೂರ್ನಿಯಲ್ಲಿ ಭಾರತ ತಂಡಕ್ಕೆ ಸೂಕ್ತ ವ್ಯವಸ್ಥೆ ಮಾಡದೇ ಬೇಕೆಂದು ತಂಡವನ್ನು ಗುರಿಮಾಡಲಾಗುತ್ತಿದಿಯೇ ಎಂಬ ಪ್ರಶ್ನೆ ಭಾರತ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ.