Team india -Ireland T20I series- ಐರ್ಲೆಂಡ್ ವಿರುದ್ಧದ ಟಿ-20 ಸರಣಿ – ರೋಹಿತ್, ವಿರಾಟ್, ಪಂತ್ ಗೆ ವಿಶ್ರಾಂತಿ..!
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ರಿಷಬ್ ಪಂತ್ ಹಾಗೂ ವೇಗಿ ಜಸ್ಪ್ರಿತ್ ಬೂಮ್ರಾ ಅವರು ಮುಂದಿನ ಜೂನ್ ನಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ದದ ಎರಡು ಟಿ-20 ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾ ಎರಡು ಟಿ-20 ಪಂದ್ಯಗಳನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಈ ವಿಚಾರವನ್ನು ಐರ್ಲೆಂಡ್ ಕ್ರಿಕೆಟ್ ಸಂಸ್ಥೆಯು ಸ್ಪಷ್ಟಪಡಿಸಿದೆ. Team india – Rohit Sharma Virat Kohli, Rishab Pant may miss Ireland T20I series
ಕಳೆದ ಬಾರಿ ಇಂಗ್ಲೆಂಡ್ ವಿರುದ್ದದ ಒಂದು ಟೆಸ್ಟ್ ಪಂದ್ಯ ರದ್ದುಗೊಂಡಿತ್ತು. ಹೀಗಾಗಿ ಈ ಟೆಸ್ಟ್ ಪಂದ್ಯ ಎಡ್ಜ್ ಬಾಸ್ಟನ್ ನಲ್ಲಿ ಜುಲೈ1ರಿಂದ 5ರವರೆಗೆ ನಡೆಯಲಿದೆ. ಬಳಿಕ ಇಂಗ್ಲೆಂಡ್ ವಿರುದ್ಧ ಜುಲೈ 7ರಿಂದ ಆರು ಏಕದಿನ ಮತ್ತು ಮೂರು ಟಿ-20 ಪಂದ್ಯಗಳ ಸರಣಿ ನಡೆಯಲಿದೆ.
ಇನ್ನು ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 2018ರ ಬಳಿಕ ಇದೇ ಮೊದಲ ಬಾರಿ ಟಿ-20 ಸರಣಿಯನ್ನು ಆಡುತ್ತಿದೆ. ಈ ಹಿಂದಿನ ಎರಡು ಪಂದ್ಯಗಳ ಟಿ-20 ಸರಣಿಯನ್ನು ಟೀಮ್ ಇಂಡಿಯಾ 2-0ಯಿಂದ ಗೆದ್ದುಕೊಂಡಿತ್ತು.
ಹಾಗೇ ಐರ್ಲೆಂಡ್ ತಂಡ ಮುಂಬರುವ ವಿಶ್ವಕಪ್ ಟೂರ್ನಿಗಾಗಿ ಬಲಿಷ್ಠ ತಂಡಗಳ ವಿರುದ್ದವೇ ಟಿ-20 ಪಂದ್ಯಗಳನ್ನು ಆಡುತ್ತಿದೆ. ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಭಾರತ ಮತ್ತು ಅಫಘಾನಿಸ್ತಾನ ವಿರುದ್ಧ ಟಿ-20 ಪಂದ್ಯಗಳನ್ನು ಆಡಲಿದೆ.