ಟೀಮ್ ಇಂಡಿಯಾ ಬದ್ಧ ವೈರಿ ಪಾಕಿಸ್ತಾನ ವಿರುದ್ಧ 2027ರವರೆಗೆ ಯಾವುದೇ ಉಭಯ ಸರಣಿ ಆಡುವುದಿಲ್ಲ ಎಂದು ತಿಳಿದು ಬಂದಿದೆ.
ಬಿಸಿಸಿಐ ಮುಂಬರುವ ಟೂರ್ನಿಗಳ ಕುರಿತು 2023-2027ರ ವೇಳಾಪಟ್ಟಿಯನ್ನು (ಎಫ್ ಟಿಪಿ) ರಾಜ್ಯ ಅಸೋಸಿಯೇನ್ ಗಳಿಗೆ ಕಳಿಸಿದೆ.ಪಾಕಿಸ್ತಾನ ವಿರುದ್ಧದ ಕಾಲಂ ಗಳಲ್ಲಿ ಖಾಲಿ ಜಾಗವನ್ನು ಬಿಟ್ಟಿದೆ.
ದೊಡ್ಡ ಟೂರ್ನಿಗಳನ್ನು ಹೊರತು ಪಡಿಸಿ 2023ರಿಂದ 2027ರವರೆಗೆ ಭಾರತ ತಂಡ 38 ಟೆಸ್ಟ್ (ತವರಿನಲ್ಲಿ 20 ಮತ್ತು 18 ವಿದೇಶ ಟೆಸ್ಟ್), 4 ಏಕದಿನ( ತವರಿನಲ್ಲಿ,ವಿದೇಶದಲ್ಲಿ 21ಏಕದಿನ) ಹಾಗೂ 61 ಟಿ20 (ತವರಿನಲ್ಲಿ 31 ಮತ್ತು 30 ವಿದೇಶಿ) ಉಭಯ ಸರಣಿಗಳನ್ನು ಆಡಲಿದೆ.
ಪ್ರತಿ ವರ್ಷ ಐಸಿಸಿ ಪ್ರಾಯೋಜತ್ವದ ಟೂರ್ನಿಗಳು ಹಾಗೂ ಐಪಿಎಲ್ ಟೂರ್ನಿ ಇರುವುದರಿಂದ ಪಂದ್ಯಗಳನ್ನು 163 ಪಂದ್ಯಗಳಿಂದ 141ಕ್ಕೆ ಪಂದ್ಯಗಳನ್ನು ಇಳಿಸಿದೆ. ಕಳೆದ ಬಾರಿ
ಕೇಂದ್ರ ಸರ್ಕಾರದಿಂದ ಅಂತಿಮ ನಿರ್ಧಾರ ಬರುವರೆಗೂ ಬಿಸಿಸಿಐ ಪಾಕಿಸ್ತಾನ ವಿರುದ್ಧ ಉಭಯ ಸರಣಿಗೆ ಒಪ್ಪಂದ ಮಾಡಿಕೊಳ್ಳುವಂತಿಲ್ಲ.
ಆಟದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ನಿರ್ಧಾರ ಕೈಗೊಂಡಿದ್ದಾರೆ.
ಟೀಮ್ ಇಂಡಿಯಾ ತವರಿನಲ್ಲಿ ಹಾಗೂ ವಿದೇಶದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಹೆಚ್ಚು ಹೆಚ್ಚು ಟೆಸ್ಟ್ ಹಾಗೂ ಸೀಮಿತ ಓವರ್ ಗಳ ಸರಣಿಯನ್ನು ಆಡಲಿದೆ.
ಟಿ20 ಪಂದ್ಯಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಟೀಮ್ ಇಂಡಿಯಾ ತವರಿನಲ್ಲಿ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.