Team india – ಟೀಮ್ ಇಂಡಿಯಾ ಅಲ್ಲ.. ಆಮ್ಚಿ ಮುಂಬೈ..!
ನೆನಪಿರಬಹುದು.. ಸುಮಾರು ಎರಡು ದಶಕಗಳ ಹಿಂದೆ ಟೀಮ್ ಇಂಡಿಯಾದಲ್ಲಿ ಏಳು ಮಂದಿ ಆಟಗಾರರು ನಮ್ಮ ಕರ್ನಾಟಕದವರಿದ್ದರು.
ಇದು ಹಳೆಯ ಕಥೆ. ಆಗ ನಾಯಕನಾಗಿದ್ದ ಮಹಮ್ಮದ್ ಅಜರುದ್ದೀನ್ ಅವರ ಮೇಲೆ ಆರೋಪವಿತ್ತು. ದಕ್ಷಿಣ ಭಾರತದ ಆಟಗಾರರಿಗೆ ಆದ್ಯತೆ ನೀಡುತ್ತಾರೆ ಅಂತ.
ಆದ್ರೆ ನಮ್ಮ ಕರ್ನಾಟಕದವರು ಕಡಿಮೆ ಏನು ಇರಲಿಲ್ಲ. ಟೀಕೆ ಮಾಡಿದವರಿಗೆ ತಕ್ಕ ಉತ್ತರವನ್ನು ತಮ್ಮ ಆಟದಿಂದಲೇ ತೋರಿಸಿಕೊಟ್ಟಿದ್ದರು.
ಆದ್ರೆ ಈಗ ಟೀಮ್ ಇಂಡಿಯಾದಲ್ಲಿ ಮುಂಬೈ ಆಟಗಾರರು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.
ತಂಡದ ನಾಯಕ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್ ಟೀಮ್ ಇಂಡಿಯಾದಲ್ಲಿದ್ದಾರೆ. ಅದೇ ರೀತಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಇಶಾನ್ ಕಿಶಾನ್ ಮತ್ತು ಜಸ್ಪ್ರಿತ್ ಬೂಮ್ರಾ ಆಡುತ್ತಿದ್ದಾರೆ.
ಇನ್ನೊಂದು ರೀತಿಯಲ್ಲಿ ಹೇಳುವುದಾದ್ರೆ ಟೀಮ್ ಇಂಡಿಯಾದ ಪ್ರಮುಖ ಸ್ಥಾನಗಳನ್ನು ಮುಂಬೈ ಇಂಡಿಯನ್ಸ್ ಆಟಗಾರರು ಆಕ್ರಮಿಸಿಕೊಳ್ಳುತ್ತಿದ್ದಾರೆ.
ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ. ಇಶಾನ್ ಕಿಶಾನ್, ಜಸ್ಪ್ರಿತ್ ಬೂಮ್ರಾ ತಂಡದಲ್ಲಿರುವ ಪ್ರಮುಖ ಆಟಗಾರರು.
ಇನ್ನು ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಸ್ಥಾನಕ್ಕಾಗಿ ಇಶಾನ್ ಕಿಶಾನ್ ಅವರನ್ನು ಪ್ರಮೋಟ್ ಮಾಡುತ್ತಿದ್ದಾರೆ. ಇಶಾನ್ ಕಿಶಾನ್ ಜೊತೆ ಇತ್ತೀಚಿನ ಪಂದ್ಯಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದಾರೆ.
ಒಟ್ಟಿನಲ್ಲಿ ಬಹಳ ವರ್ಷಗಳ ನಂತರ ಟೀಮ್ ಇಂಡಿಯಾದಲ್ಲಿ ಮುಂಬೈ ಲಾಬಿ ನಡೆಯುತ್ತಿದೆ ಎಂಬ ಅನುಮಾನ ಕೂಡ ಮೂಡುತ್ತಿದೆ.
ಒಂದಂತೂ ಸತ್ಯ, ಟೀಮ್ ಇಂಡಿಯಾ ಗೆಲ್ಲಬೇಕು. ಅತ್ಯುತ್ತಮ ಪ್ರದರ್ಶನ ನೀಡಬೇಕು. ಹಾಗೇ ಉಳಿದ ಪ್ರತಿಭಾನ್ವಿತ ಆಟಗಾರರಿಗೂ ಅವಕಾಶಗಳನ್ನು ನೀಡಬೇಕು.
ಹಾಗಂತ ಮುಂಬೈ ಇಂಡಿಯನ್ಸ್ ಅಥವಾ ಮುಂಬೈ ಆಟಗಾರರು ಕಳಪೆ ಪ್ರದರ್ಶನ ನೀಡಿದ್ರೂ ಅವಕಾಶ ನೀಡ್ತಾರೆ ಅಂತ ಹೇಳುತ್ತಿಲ್ಲ. ಇಶಾನ್ ಕಿಶಾನ್, ಸೂರ್ಯಕುಮಾರ್ಯಾದವ್, ಶ್ರೇಯಸ್ ಅಯ್ಯರ್, ಜಸ್ಪ್ರಿತ್ ಬೂಮ್ರಾ ಎಲ್ಲರೂ ಕೂಡ ಉತ್ತಮ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಆದ್ರೆ ತಂಡವನ್ನು ನೋಡಿದಾಗ ಒಂದು ಕ್ಷಣ ಟೀಮ್ ಇಂಡಿಯಾ ಅಲ್ಲ.. ಆಮ್ಚಿ ಮುಂಬೈ ಅಂತ ಅನ್ನಿಸಿತ್ತು ಅಷ್ಟೇ..!