Sunday, September 24, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

ಪಾರ್ಲ್​ನಲ್ಲಿ ದಕ್ಷಿಣ ಆಫ್ರಿಕಾ ಮಿಂಚು, ಲಾರ್ಡ್​ ಥಾಕೂರ್​​​ ಹೋರಾಟಕ್ಕೆ ಸಿಗಲಿಲ್ಲ ಬೆಂಬಲ..!

January 19, 2022
in Cricket, ಕ್ರಿಕೆಟ್
ಪಾರ್ಲ್​ನಲ್ಲಿ ದಕ್ಷಿಣ ಆಫ್ರಿಕಾ ಮಿಂಚು, ಲಾರ್ಡ್​ ಥಾಕೂರ್​​​ ಹೋರಾಟಕ್ಕೆ ಸಿಗಲಿಲ್ಲ ಬೆಂಬಲ..!
Share on FacebookShare on TwitterShare on WhatsAppShare on Telegram

ಪಾರ್ಲ್​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಆತಿಥೇಯ ದಕ್ಷಿಣ ಆಫ್ರಿಕಾದ ಪಾಲಾಗಿದೆ. ಟೀಮ್​​ ಇಂಡಿಯಾ ಅಂದುಕೊಂಡಿದ್ದು ಯಾವುದೂ ಸರಿಯಾಗಿ ನಡೆಯಲಿಲ್ಲ. ಶಿಖರ್​​ ಧವನ್​​ ಆರಂಭದಲ್ಲಿ ಹಾಗೂ ಲಾರ್ಡ್​ ಖ್ಯಾತಿಯ ಶಾರ್ದೂಲ್​​ ಥಾಕೂರ್​​​ ಅಂತ್ಯದಲ್ಲಿ ಮಿಂಚಿದ್ದು ಬಿಟ್ಟರೆ ಮೊದಲ ಪಂದ್ಯದಲ್ಲಿ ಟೀಮ್​​ ಇಂಡಿಯಾಕ್ಕೆ ಏನೂ ಸಿಗಲಿಲ್ಲ.

ಟಾಸ್​​ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್​​ ಆರಿಸಿಕೊಂಡಿತು. ಜನ್ನೆಮನ್​​ ಮಲನ್​​ 6 ರನ್​ ಮತ್ತು ಕ್ವಿಂಟನ್​​ ಡಿ ಕಾಕ್ 27 ರನ್​​ಗಳಿಸಿ ನಿರ್ಗಮಿಸಿದ್ದರು.  ಏಡಿಯನ್​​ ಮಾರ್ಕ್​ ರಾಂ ಕೂಡ 6 ರನ್​​ಗಳಿಸಿದ್ದಾಗ ರನ್​​​ ಔಟ್​​ ಆಗಿದ್ದರು.  ಟೀಮ್​​ ಇಂಡಿಯಾದ ಕೈಯಲ್ಲಿದ್ದ ಪಂದ್ವಯನ್ನು ನಾಯಕ ಟೆಂಬ ಬವುಮಾ ಮತ್ತು ​​ರಾಸಿ ವಾಂಡರ್​​ ಡ್ಯುಸನ್​​ 204 ರನ್​​ಗಳ ಜೊತೆಯಾಟ ಆಡುವ ಮೂಲಕ ಆತಿಥೇಯರ ಪರ ವಾಲಿಸಿದರು. ಬವುಮಾ 143 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 110 ರನ್​​ಗಳಿಸಿ ಔಟಾದರು.

ರಾಸಿ ವಾಂಡರ್​ ಡ್ಯುಸನ್​​ ಅಬ್ಬರಿಸಿ ಬೊಬ್ಬರಿದರು.  96 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್​​ ಗಳ ನೆರವಿನಿಂದ ಅಜೇಯ 129 ರನ್​​ಗಳಿಸಿ ಮಿಂಚಿದರು.  ದಕ್ಷಿಣ ಆಫ್ರಿಕಾ 50 ಓವರುಗಳಲ್ಲಿ 4 ವಿಕೆಟ್​​ ನಷ್ಟಕ್ಕೆ 296 ರನ್​​ಗಳಿಸಿತು.

ಚೇಸಿಂಗ್​​ಗೆ ಹೊರಟ ಟೀಮ್​​ ಇಂಡಿಯಾಕ್ಕೆ ಮಾರ್ಕ್​ ರಾಂ ನಾಯಕ ಕೆ.ಎಲ್​​ ರಾಹುಲ್​​ (12) ವಿಕೆಟ್​​ ಪಡೆಯುವ ಮೂಲಕ ಶಾಕ್​​ ನೀಡಿದರು. ಶಿಖರ್​​ ಧವನ್​​ ಮತ್ತು ವಿರಾಟ್​​ ಕೊಹ್ಲಿ ನಡುವೆ 92 ರನ್​​ಗಳ ಜೊತೆಯಾಟ ಬಂದಾಗ ಗೆಲುವಿನ ಕನಸು ಹುಟ್ಟಿಕೊಂಡಿತ್ತು. ಧವನ್​​ 84 ಎಸೆತಗಳಲ್ಲಿ 79 ರನ್​​ಗಳಿಸಿ ಔಟಾದರೆ, ವಿರಾಟ್​​ 63 ಎಸೆತಗಳಲ್ಲಿ 51 ರನ್​ಗಳಿಸಿ ಹೊರ ನಡೆದರು.

ಮಧ್ಯಮ ಸರದಿಯಲ್ಲಿ ಟೀಮ್​​ ಇಂಡಿಯಾ ಕುಸಿತ ಕಂಡಿತು. ಶ್ರೇಯಸ್​​ ಅಯ್ಯರ್​​ (17), ರಿಷಬ್​​ ಪಂತ್​​ (16), ವೆಂಕಟೇಶ್​​ ಅಯ್ಯರ್​​ (2), ರವಿಚಂದ್ರನ್​​ ಅಶ್ವಿನ್​​​ (7) ಮತ್ತು ಭುವನೇಶ್ವರ್​​ ಕುಮಾರ್​​ (4) ಹೆಚ್ಚಿನ ಕೊಡುಗೆ ನೀಡಲಿಲ್ಲ.  ಹೀನಾಯ ಸೋಲಿನ ಕಡೆ ಮುಖ ಮಾಡಿದ್ದ ಟೀಮ್​​ ಇಂಡಿಯಾದ ಮಾನ ಉಳಿಸಿದ್ದು ಲಾರ್ಡ್​ ಖ್ಯಾತಿಯ ಶಾರ್ದೂಲ್​​ ಥಾಕೂರ್​​. ಶಾರ್ಧೂಲ್​​ ಕೇವಲ 43 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​​ ನೆರವಿನಿಂದ ಅಜೇಯ 50 ರನ್​​ಗಳಿಸಿದರು. 50 ಓವರುಗಳಲ್ಲಿ ಟೀಮ್​​ ಇಂಡಿಯಾ 8 ವಿಕೆಟ್​ ಕಳೆದುಕೊಂಡು 265 ರನ್​​ಗಳನ್ನಷ್ಟೇ ಗಳಿಸಿ 31 ರನ್​​ಗಳ ಸೋಲನುಭವಿಸಿತು. 3 ಪಂದ್ಯಗಳ ಸರಣಿಯಲ್ಲಿ ಟೀಮ್​​ ಇಂಡಿಯಾ 1-0 ಹಿನ್ನಡೆ ಹೊಂದಿದೆ. ಎರಡನೇ ಪಂದ್ಯವೂ ಪಾರ್ಲ್​ ಮೈದಾನದಲ್ಲೇ ನಡೆಯಲಿದೆ.

 

6ae4b3ae44dd720338cc435412543f62?s=150&d=mm&r=g

admin

See author's posts

Tags: India Tour of South AfricaODISouth AfricaTeam India
ShareTweetSendShare
Next Post
rafel nadal tennis sports karnataka

ಆಸ್ಟ್ರೇಲಿಯನ್ ಓಪನ್ 2022- ಮೂರನೇ ಸುತ್ತು ಪ್ರವೇಶಿಸಿದ ರಫೆಲ್ ನಡಾಲ್

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

IND v AUS: 2ನೇ ODIನಲ್ಲಿ ಟಾಸ್‌ ಗೆದ್ದ ಆಸೀಸ್‌ ಫೀಲ್ಡಿಂಗ್‌ ಆಯ್ಕೆ: ಬುಮ್ರಾ ಬದಲು ಪ್ರಸಿದ್ಧ್‌ಗೆ ಸ್ಥಾನ

September 24, 2023
Asia Cup: ಬುಮ್ರಾ ಹಾಗೂ ರಾಹುಲ್‌ ಟೀಂ ಇಂಡಿಯಾದ ಕಮ್‌ಬ್ಯಾಕ್‌ ಕಿಂಗ್‌ಗಳು

IND v AUS: 2ನೇ ಪಂದ್ಯಕ್ಕೆ ಬುಮ್ರಾ ಅಲಭ್ಯ: ಬದಲಿ ಆಟಗಾರನಾಗಿ ಮುಖೇಶ್‌ ಆಯ್ಕೆ

September 24, 2023
IND v BAN: ಗಿಲ್‌, ಅಕ್ಸರ್‌ ಹೋರಾಟ ವ್ಯರ್ಥ: ಬಾಂಗ್ಲಾ ವಿರುದ್ಧ ಸೋತ ಭಾರತ

IND v AUS: ಇಂಧೋರ್‌ನಲ್ಲಿ ಶತಕ ಸಿಡಿಸಿದ್ದ ಗಿಲ್‌: ಆಸೀಸ್‌ ವಿರುದ್ದ ಅಬ್ಬರಿಸೋ ನಿರೀಕ್ಷೆ

September 24, 2023
Asia Cup: ಏಕದಿನ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡವನ್ನ ಹಿಂದಿಕ್ಕಿದ ಭಾರತ

IND v AUS: ಇಂಧೋರ್‌ ಮೈದಾನದಲ್ಲಿ ಸೋಲನ್ನೇ ಕಾಣದ ಟೀಂ ಇಂಡಿಯಾ

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram