Team India Loose: ಬೌಲಿಂಗ್ ವೈಫಲ್ಯ ಅನುಭವಿಸಿದ ಟೀಮ್ ಇಂಡಿಯಾ ದ.ಆಫ್ರಿಕಾ ವಿರುದ್ಧ 5 ವಿಕೆಟ್ಗಳ ವೀರೋಚಿತ ಸೋಲು ಅನುಭವಿಸಿದೆ.ಇದರೊಂದಿಗೆ ಟೀಮ್ ಇಂಡಿಯಾ ಟೂರ್ನಿಯಲ್ಲಿ ಮೊದಲ ಸೋಲು ಕಂಡಿತು. ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾಕ್ಕೇರಿತು.
ಪರ್ತ್ ಮೈದಾನದಲ್ಲಿ ನಡೆದ ಗ್ರೂಪ್ 2ರ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಕಲೆ ಹಾಕಿತು. ದಕ್ಷಿಣ ಆಫ್ರಿಕಾ 19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.
134 ರನ್ಗಳ ಗೆಲುವಿನ ಟಾರ್ಗೆಟ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕಿರಾದ ಕ್ವಿಂಟಾನ್ ಡಿಕಾಕ್ (1 ರನ್) ಹಾಗೂ ರೀಲಿ ರೊಸೊ (0) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಾಯಕ ಟೆಂಬಾ ಬಾವುಮಾ 10 ರನ್ ಕಲೆ ಹಾಕಿ ಮೊಹ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.
ನಾಲ್ಕನೆ ವಿಕೆಟ್ಗೆ ಜೊತೆಗೂಡಿದ ಏಡಿನ್ ಮಾರ್ಕ್ರಾಮ್ 52ರನ್ (ಎಸೆತ 41, 6 ಬೌಂಡರಿ 1 ಸಿಕ್ಸರ್) ಸಿಡಿಸಿದರು. ಡೇವಿಡ್ ಮಿಲ್ಲರ್ ಅಜೇಯ 59 ರನ್ (46 ಎಸೆತ, 4 ಬೌಂಡರಿ, 3 ಸಿಕ್ಸರ್). ಈ ಜೋಡಿ 76 ರನ್ ಸೇರಿಸಿ ಗೆಲುವಿನ ಆಸೆಯನ್ನು ಚಿಗೊರೊಡೆಸಿತು.
52 ರನ್ ಗಳಿಸಿದ್ದ ಏಡಿನ್ ಮಾರ್ಕ್ರಾಮ್ ಸೂರ್ಯ ಕುಮಾರ್ಗೆ ಕ್ಯಾಚ್ ನೀಡಿ ಹೊರ ನಡೆದರು. ಟ್ರಿಸ್ಟನ್ ಸ್ಟಬ್ಸ್ (6 ರನ್) ಅಶ್ವಿನ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು.
ಕೊನೆಯ ಓವರ್ನಲ್ಲಿ ದ.ಆಫ್ರಿಕಾಕ್ಕೆ ಗೆಲ್ಲಲು 6 ರನ್ ಬೇಕಿತ್ತುಘಿ. ಡೇವಿಡ್ ಮಿಲ್ಲರ್ 2 ಬೌಂಡರಿ ಹೊಡೆದು 2 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.
ಭಾರತ ಪರ ಆರ್ಷದೀಪ್ 25ಕ್ಕೆ 2, ಮೊಹ್ಮದ್ ಶಮಿ 13ಕ್ಕೆ1, ಹಾರ್ದಿಕ್ ಪಾಂಡ್ಯ 29ಕ್ಕೆ 1, ಆರ್.ಅಶ್ವಿನ್ 43ಕ್ಕೆ 1 ವಿಕೆಟ್ ಪಡೆದರು.
ಸೂರ್ಯ ಕುಮಾರ್ ಏಕಾಂಗಿ ಹೋರಾಟ
ಇದಕ್ಕೂ ಮುನ್ನ ಭಾರತ ತಂಡ ವೇಗಿ ಲುಂಗಿ ಎನ್ಗಿಡಿ ದಾಳಿಗೆ ಭಾರತಕ್ಕೆ ಆಘಾತ ಅನುಭವಿಸಿತು. ಕೆ.ಎಲ್.ರಾಹುಲ್ (9ರನ್), ನಾಯಕ ರೋಹಿತ್ ಶರ್ಮಾ (15ರನ್), ವಿರಾಟ್ ಕೊಹ್ಲಿ 12 ರನ್ ಗಳಿಸಿ ಲುಂಗಿ ಎನ್ಗಿಡಿಗೆ ವಿಕೆಟ್ ಒಪ್ಪಿಸಿದರು.
ನಾಲಕ್ನೆ ಕ್ರಮಾಂಕದಲ್ಲಿ ಬಂದ ಸೂರ್ಯ ಕುಮಾರ್ ಯಾದವ್ 68 ರನ್ (40 ಎಸೆತ, 6ಬೌಂಡರಿ, 3 ಸಿಕ್ಸರ್) ಹೊಡೆದರು. ನಂತರ ಬಂದ ದೀಪಕ್ ಹೂಡಾ 0,ಹಾರ್ದಿಕ್ ಪಾಂಡ್ಯ 2 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಏಳನೆ ಕ್ರಮಾಂಕದಲ್ಲಿ ಬಂದ ದಿನೇಶ್ ಕಾರ್ತಿಕ್ ನಿಧನಗತಿಯಲ್ಲಿ ಆಡಿ ತಂಡದ ಮೊತ್ತ ಹೆಚ್ಚಿಸಿದರು. ಆದರೆ 6 ರನ್ ಗಳಿಸಿದಾಗ ಪಾರ್ನಲ್ಗೆ ವಿಕೆಟ್ ಒಪ್ಪಿಸಿದರು. ಆರ್.ಅಶ್ವಿನ್ 7 ರನ್ ಗಳಿಸಿದರು.
ಏಕಾಂಗಿ ಹೋರಾಟ ಮಾಡಿದ ಸೂರ್ಯ ಕುಮಾರ್ 30 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. 68 ರನ್ ಗಳಿಸಿದ್ದಾಗ ಪಾರ್ನೆಲ್ಗೆ ವಿಕೆಟ್ ಒಪ್ಪಿಸಿದರು.
ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ಗಿಡಿ 29ಕ್ಕೆ 4, ವಾಯ್ನೆ ಪಾರ್ನೆಲ್ 15ಕ್ಕೆ 3, ನೊಟ್ರ್ಜೆ 23ಕ್ಕೆ 1 ವಿಕೆಟ್ ಪಡೆದರು. 4 ವಿಕೆಟ್ ಪಡೆದ ಲುಂಗಿ ಎನ್ಗಿಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.