Team india – ಇಶಾನ್ ಕಿಶಾನ್ ಆಸ್ಪತ್ರೆಗೆ ದಾಖಲು- ಮೂರನೇ ಪಂದ್ಯಕ್ಕೆ ಅಲಭ್ಯ..?

ಟೀಮ್ ಇಂಡಿಯಾದ ಯುವ ಬ್ಯಾಟ್ಸ್ ಮೆನ್ / ವಿಕೆಟ್ ಕೀಪರ್ ಇಶಾನ್ ಕಿಶಾನ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದ ವೇಳೆ ಇಶಾನ್ ಕಿಶಾನ್ ಗಾಯಗೊಂಡಿದ್ದರು.
4ನೇ ಓವರ್ ನಲ್ಲಿ ಲಂಕಾದ ವೇಗಿ ಲಹಿರು ಕುಮಾರ ಅವರ ಬೌನ್ಸರ್ ಎಸೆತ ಇಶಾನ್ ಕಿಶಾನ್ ಅವರ ಹೆಲ್ಮೆಟ್ ಗೆ ಬಡಿಯಿತ್ತು. ಇದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಅನುಮಾನದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ರಾತ್ರಿ ಆಸ್ಪತ್ರೆಗೆ ದಾಖಲಾಗಿರುವ ಇಶಾನ್ ಕಿಶಾನ್ ಅವರಿಗೆ ಬ್ರೈನ್ ಸ್ಕ್ಯಾನಿಂಗ್ ಮಾಡಲಾಗಿದೆ. ವರದಿ ಬಂದ ಬಳಿಕ ಮತ್ತೆ ಟೀಮ್ ಇಂಡಿಯಾದ ಹೊಟೇಲ್ ಗೆ ತೆರಳುವ ಸಾಧ್ಯತೆ ಇದೆ. ಆದ್ರೆ ಇಶಾನ್ ಕಿಶಾನ್ ಅವರಿಗೆ ಗಂಭೀರವಾದ ಗಾಯವೇನೂ ಆಗಿಲ್ಲ. ಆದ್ರೆ ಮುನ್ನೆಚ್ಚೆರಿಕೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. Team india – Ishan Kishan hospitalised after blow to head
ಧರ್ಮಶಾಲದಲ್ಲಿ ನಡೆದ ಎರಡನೇ ಟಿ-20 ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದುಕೊಂಡು ಸರಣಿಯನ್ನು ಕೂಡ ಕೈವಶ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಇಶಾನ್ ಕಿಶಾನ್ ಅವರು 15 ಎಸೆತಗಳಲ್ಲಿ 16 ರನ್ ಗಳಿಸಿದ್ದರು.
ಇನ್ನೊಂದೆಡೆ ಇಶಾನ್ ಕಿಶಾನ್ ಅವರು ಮೂರನೇ ಟಿ-20 ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಹೀಗಾಗಿ ರೋಹಿತ್ ಜೊತೆ ವೆಂಕಟೇಶ್ ಅಯ್ಯರ್ ಅಥವಾ ಮಯಾಂಕ್ ಅಗರ್ ವಾಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ಈಗಾಗಲೇ ಟೀಮ್ ಇಂಡಿಯಾದ ಸೂರ್ಯ ಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್ ಮತ್ತು ದೀಪಕ್ ಚಾಹರ್ ಅವರು ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ.