Team India – ಹಾರ್ದಿಕ್ ಪಾಂಡ್ಯ ಕ್ವಾಲಿಟಿ ಆಲ್ ರೌಂಡರ್.. ಕೋಚ್ ನ ಸಲಹೆ ಅಗತ್ಯವಿಲ್ಲ..!
ಹಾರ್ದಿಕ್ ಪಾಂಡ್ಯ.. ಸದ್ಯ ಭಾರತೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಚಾಲ್ತಿಯಲ್ಲಿರುವ ಕ್ರಿಕೆಟಿಗ.
ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡ ಹೆಗ್ಗಳಿಕೆ ಹಾರ್ದಿಕ್ ಪಾಂಡ್ಯ ಅವರಿಗೆ ಸಲ್ಲುತ್ತದೆ.
ಅದೇ ರೀತಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲೂ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಮುಂಬರುವ ಐರ್ಲೆಂಡ್ ವಿರುದ್ದದ ಟಿ-20 ಸರಣಿಗೂ ಟೀಮ್ ಇಂಡಿಯಾದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಗಾಯದಿಂದ ದೂರವೇ ಉಳಿದಿದ್ದ ಹಾರ್ದಿಕ್ ಪಾಂಡ್ಯ ಫಿನಿಕ್ಸ್ ನಂತೆ ಮತ್ತೆ ಮೇಲೆದ್ದು ಬಂದಿದ್ದಾರೆ.
ನೋಡೋಕೆ ಒರಟನಾದ್ರೂ ಮೈದಾನಕ್ಕಿಳಿದಾಗ ಗೆಲುವು ಒಂದೇ ಮಂತ್ರವಾಗಿರುತ್ತದೆ. ಇದು ಹಾರ್ದಿಕ್ ಪಾಂಡ್ಯ ಅವರ ಸಿದ್ಧಾಂತ ಕೂಡ ಹೌದು. ಆಲ್ ರೌಂಡ್ ಆಟವನ್ನಾಡುವ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಮ್ಯಾಚ್ ಫಿನಿಶರ್ ಕೂಡ ಹೌದು.
ಇದೀಗ ಆಸ್ಟ್ರೇಲಿಯಾ ಮಾಜಿ ವೇಗಿ ಗ್ಲೇನ್ ಮೆಕ್ ಗ್ರಾಥ್ ಕೂಡ ಹಾರ್ದಿಕ್ ಪಾಂಡ್ಯ ಅವರ ಆಟದ ಬಗ್ಗೆ ಗುಣಗಾನ ಮಾಡಿದ್ದಾರೆ. Team India – Hardik Pandya knows what he needs to do, doesn’t need to be told by coaches
ಹಾರ್ದಿಕ್ ಪಾಂಡ್ಯ ಕ್ವಾಲಿಟಿ ಪ್ಲೇಯರ್. ಕ್ವಾಲಿಟಿ ಆಲ್ ರೌಂಡರ್. ಕ್ವಾಲಿಟಿ ಹಿಟ್ಟರ್. ಅವರಿಗೆ ಯಾವಾಗ ಹೇಗೆ, ಯಾವ ರೀತಿ ಆಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಹೀಗಾಗಿ ತರಬೇತುದಾರನ ಸಲಹೆ ಮಾರ್ಗದರ್ಶನಗಳು ಬೇಕಾಗಿಲ್ಲ ಎಂದು ಗ್ಲೇನ್ ಮೆಕ್ ಗ್ರಾಥ್ ಹೇಳಿದ್ದಾರೆ.
ಇನ್ನು ಹಾರ್ದಿಕ್ ಪಾಂಡ್ಯ ಅವರು ಸಾಕಷ್ಟು ಅನುಭವ ಕೂಡ ಹೊಂದಿದ್ದಾರೆ. ಹೀಗಾಗಿ ಅವರು ತಮ್ಮ ಹಳೆಯ ಲಯವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಬೆನ್ನು ನೋವಿನ ಚಿಕಿತ್ಸೆಯ ನಂತರ ಅವರು ಕಮ್ ಬ್ಯಾಕ್ ಮಾಡಿದ್ದಾರೆ ಎಂದು ಮೆಕ್ ಗ್ರಾಥ್ ಹೇಳಿದ್ದಾರೆ.
ಗ್ಲೇನ್ ಮೆಕ್ ಗ್ರಾಥ್ ಅವರು ಚೆನ್ನೈನಲ್ಲಿರುವ ಎಮ್ ಆರ್ ಎಫ್ ಫೌಂಡೇಷನ್ ಕೂಡ ಮುಖ್ಯಸ್ಥರಾಗಿದ್ದಾರೆ. ತಮ್ಮ ಗರಡಿಯಲ್ಲಿ ಪಳಗಿದ್ದ 19 ವೇಗಿಳು ಈ ಬಾರಿಯ ಐಪಿಎಲ್ ನಲ್ಲಿ ಆಡಿದ್ದಾರೆ. ಇದು ನನಗೆ ಹೆಮ್ಮೆ ಅನ್ನಿಸುತ್ತದೆ ಎಂದು ಕೂಡ ಹೇಳಿದ್ದಾರೆ.
ಮಹೇಶ್ ಚೌಧುರಿ, ದೀಪಕ್ ಚಾಹರ್, ಪ್ರಸಿದ್ದ್ ಕೃಷ್ಣ, ಖಲೀಲ್ ಅಹಮ್ಮದ್ ಮೊದಲಾದ ಬೌಲರ್ ಗಳ ಬಗ್ಗೆಯೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.