Team india – ಅಶ್ವಿನ್ ಸೇರಿದಂತೆ ಎಲ್ಲರೂ ಫಿಟ್ ಆಗಿದ್ದಾರೆ..ಆದ್ರೆ ಟೀಮ್ ಕಾಂಬಿನೇಷನ್ ಹೇಳಲ್ಲ – ಜಸ್ಪ್ರಿತ್ ಬೂಮ್ರಾ

ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಮಾಚ 4ರಿಂದ ಶುರುವಾಗಲಿದೆ. ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕನಾಗಿ ಇದು ಮೊದಲ ಪಂದ್ಯವಾದ್ರೆ, ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ನೂರನೇ ಟೆಸ್ಟ್ ಪಂದ್ಯ.
ಈಗಾಗಲೇ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸದಲ್ಲಿ ನಿರತವಾಗಿವೆ. ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಮ್ಯಾನೇಜ್ ಮೆಂಟ್ 11ರ ಬಳಗವನ್ನು ಆಯ್ಕೆ ಮಾಡಿದೆ. ಆದ್ರೆ ಯಾರು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.
ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪನಾಯಕ ಜಸ್ಪ್ರಿತ್ ಬೂಮ್ರಾ ಅವರು, ತಂಡದ ಎಲ್ಲಾ ಆಟಗಾರರು ಫಿಟ್ ಆಗಿದ್ದಾರೆ. ಆದ್ರೆ ಟೀಮ್ ಕಾಂಬಿನೇಷನ್ ಬಗ್ಗೆ ಈಗಲೇ ಹೇಳುವುದಿಲ್ಲ. ಅದಕ್ಕೆ ಇನ್ನೂ ಟೈಮ್ ಇದೆ ಎಂದು ಹೇಳಿದ್ದಾರೆ.
ಮುಖ್ಯವಾಗಿ ಆರ್. ಅಶ್ವಿನ್ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ನೆಟ್ ಅಭ್ಯಾಸದ ವೇಳೆ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಅಭ್ಯಾಸವನ್ನು ಮಾಡುತ್ತಿದ್ದಾರೆ. ಹೀಗಾಗಿ 11ರ ಆಯ್ಕೆಗೆ ಅವರು ರೆಡಿಯಾಗಿದ್ದಾರೆ ಎಂಬ ಮಾಹಿತಿಯನ್ನು ಬೂಮ್ರಾ ನೀಡಿದ್ದಾರೆ.
ಆರ್. ಅಶ್ವಿನ್ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್. ಅಶ್ವಿನ್ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರ. ಹೀಗಾಗಿ ತಂಡದಲ್ಲಿ ಅವರ ಪಾತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ. ಗಾಯದಿಂದ ಅಶ್ವಿನ್ ಪೂರ್ತಿ ಚೇತರಿಸಿಕೊಂಡಿದ್ದಾರೆ ಎಂದು ಬೂಮ್ರಾ ತಿಳಿಸಿದ್ದಾರೆ.

ಇನ್ನು ಉಪನಾಯಕನಾಗಿ ರೋಹಿತ್ ಶರ್ಮಾ ಅವರಿಗೆ ನೆರವು ನೀಡುತ್ತೇನೆ. ಯಾವುದೇ ಹಂತದಲ್ಲೂ ತಂಡದ ಬೆಂಬಲಕ್ಕೆ ನಿಲ್ಲುತ್ತೇನೆ. ಸಂದರ್ಭವನ್ನು ಅರಿತುಕೊಂಡು ಆಡುತ್ತೇನೆ. ಉಪನಾಯಕನ ಜವಾಬ್ದಾರಿ ಸಿಕ್ಕಿರುವುದು ತುಂಬಾನೇ ಖುಷಿಯಾಗುತ್ತಿದೆ. ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದು ಜಸ್ಪ್ರಿತ್ ಬೂಮ್ರಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. Team india – Ashwin is fit and available for selection:Jasprit Bumrah
ಇನ್ನು, ನಾಯಕ ರೋಹಿತ್ ಶರ್ಮಾ ಜೊತೆ ಮಯಾಂಕ್ ಅಗರ್ ವಾಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿದ್ರೆ, ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುವ ಸಾಧ್ಯತೆ ಇದೆ. ಇನ್ನುಳಿದಂತೆ ರಿಷಬ್ ಪಂತ್, ಹನುಮ ವಿಹಾರಿ, ರವೀಂದ್ರ ಜಡೇಜಾ, ಆರ್. ಅಶ್ವಿನ್, ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಸೀರಾಜ್, ಮಹಮ್ಮದ್ ಶಮಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.