ವಿಶ್ವದ ಕ್ರಿಕೆಟ್ ಫ್ಯಾನ್ಸ್ಗಳಲ್ಲಿ ಭಾರೀ ಕುತೂಹಲ ಕೆರಳಿಸಿರುವ 2022ರ T20I ವಿಶ್ವಕಪ್(T20 World Cup) ಟೂರ್ನಿಗೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಆದರೆ ದಿಗ್ಗಜ ತಂಡಗಳ ನಡುವಿನ ಮೆಗಾ ಫೈಟ್(Mega Fight) ಆರಂಭಕ್ಕೂ ಮೊದಲೇ ಹಲವು ಪ್ಲೇಯರ್ಗಳು ಗಮನಾರ್ಹ ಪ್ರದರ್ಶನ ನೀಡಿ ಮಿಂಚಿದ್ದಾರೆ. ಕಾಂಗರೂ ನಾಡಿನಲ್ಲಿ ನಡೆಯುತ್ತಿರುವ ಚುಟುಕು ಕ್ರಿಕೆಟ್ ಸಮರದ ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಅನೇಕ ಆಟಗಾರರು ತಮ್ಮ ವೈಯಕ್ತಿಕ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಕ್ರಿಕೆಟ್ ಜಗತ್ತು ತಿರುಗಿ ನೋಡುವ ರೀತಿಯಲ್ಲಿ ಮಿಂಚಿದ ಟಾಪ್-5 ಆಟಗಾರರ ಲಿಸ್ಟ್ ಇಲ್ಲಿದೆ.
1. ಸಿಕಂದರ್ ರಜಾ಼:
ಜಿಂಬಾಬ್ವೆ ತಂಡದ ಸ್ಟಾರ್ ಆಲ್ರೌಂಡರ್ ಎನಿಸಿರುವ ಸಿಕಂದರ್ ರಜಾ಼, ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನದಿಂದ ಮಿಂಚಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಕಮಾಲ್ ಮಾಡಿರುವ ಸಿಕಂದರ್, ಗುಂಪು ಹಂತದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 172.15 ಸ್ಟ್ರೈಕ್ ರೇಟ್ ಹಾಗೂ 45.33ರ ಸರಾಸರಿಯಲ್ಲಿ 136 ರನ್ಗಳಿಸಿದ್ದಾರೆ. ಬೌಲಿಂಗ್ನಲ್ಲೂ ಸಹ ಮೋಡಿ ಮಾಡಿರುವ ಸಿಕಂದರ್ ರಜಾ಼, 5.54ರ ಸರಾಸರಿಯಲ್ಲಿ ಐದು ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ.
2. ಮ್ಯಾಕ್ಸ್ ಓಡೌಡ್:
ನೆದರ್ಲೆಂಡ್ಸ್ ತಂಡದ ಮ್ಯಾಕ್ಸ್ ಓಡೌಡ್, ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಗಮನ ಸೆಳೆದರು. ಮೂರು ಪಂದ್ಯಗಳಿಂದ 129 ರನ್ಗಳಿಸಿದ್ದ ಓಡೌಡ್, ಕೊನೆಯ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ನಿಂದ 53 ಬಾಲ್ಗಳಲ್ಲಿ ಅಜೇಯ 71* ರನ್ಗಳಿಸಿದರು, ತಂಡಕ್ಕೆ ಗೆಲುವು ತಂದುಕೊಡಲು ಆಗಲಿಲ್ಲ.
3. ಜಾರ್ಜ್ ಮುನ್ಸೆ:
ಸ್ಕಾಟ್ಲೆಂಡ್ನ ಪ್ರಮುಖ ಬ್ಯಾಟ್ಸ್ಮನ್ ಜಾರ್ಜ್ ಮುನ್ಸೆ, ಗ್ರೂಪ್ ಸ್ಟೇಜ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಮೂರು ಪಂದ್ಯದಲ್ಲಿ 2 ಅರ್ಧಶತಕದ ನೆರವಿನೊಂದಿಗೆ 121 ರನ್ಗಳಿಸಿ ಮಿಂಚಿದರು.
4. ವನಿಂದು ಹಸರಂಗ:
ಶ್ರೀಲಂಕಾ ತಂಡದ ವನಿಂದು ಹಸರಂಗ, ಸ್ಪಿನ್ ಮೋಡಿ ಮಾಡಿದ್ದಾರೆ. ಚಾಣಾಕ್ಷ ಸ್ಪಿನ್ ಬೌಲಿಂಗ್ ಮೂಲಕ ಮಿಂಚಿದ ಹಸರಂಗ, 5.25ರ ಎಕಾನಮಿ ಮೂಲಕ 7 ವಿಕೆಟ್ ಪಡೆದು ಗಮನಾರ್ಹ ಪ್ರದರ್ಶನ ನೀಡಿದರು.
5. ಬಾಸ್ ಡೆಲೀಡ್:
ನೆದರ್ಲೆಂಡ್ಸ್ ತಂಡದ ಮತ್ತೋರ್ವ ಆಟಗಾರ ಬಾಸ್ ಡೆಲೀಡ್, ತಮ್ಮ ಅದ್ಭುತ ಬೌಲಿಂಗ್ನಿಂದ ಮಿಂಚಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ 7 ವಿಕೆಟ್ ಪಡೆದು ಡೆಲೀಡ್, ತಮ್ಮ ತಂಡ ಸೂಪರ್-12 ಹಂತಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.