ಆರಂಭಿಕ(Opener) ಬ್ಯಾಟ್ಸ್‌ಮನ್ ಕುಸಲ್ ಮೆಂಡಿಸ್(Kusal Mendis) 68* ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದ ಪ್ರಾಬಲ್ಯ ಮೆರೆದ ಶ್ರೀಲಂಕಾ, ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆಲುವಿನ ನಗೆಬೀರಿದೆ.
ಹೋಬಾರ್ಟ್(Hobart)ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಐರ್ಲೆಂಡ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಪೌಲ್ ಸ್ಟಿರ್ಲಿಂಗ್(34) ಹಾಗೂ ಹ್ಯಾರಿ ಟೆಕ್ಟರ್(45) ಅವರ ಜವಾಬ್ದಾರಿಯ ಆಟದಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಶ್ರೀಲಂಕಾ 15 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 133 ರನ್‌ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಐರ್ಲೆಂಡ್ ಬ್ಯಾಟಿಂಗ್ ವೈಫಲ್ಯ:
ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ಇನ್ನಿಂಗ್ಸ್ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಆರಂಭಿಕರಾಗಿ ಕಣಕ್ಕಿಳಿದ ಬಾಲ್ಬರ್ನಿ(1) ಇನ್ನಿಂಗ್ಸ್‌ನ 2ನೇ ಓವರ್‌ನಲ್ಲೇ ವಿಕೆಟ್ ಒಪ್ಪಿಸಿದರೆ. ನಂತರ ಕಣಕ್ಕಿಳಿದ ಲೊರ್ಕನ್ ಟಕ್ಕರ್(10), ಕರ್ಟಿಸ್ ಕ್ಯಾಂಪರ್(2), ಜಾರ್ಜ್ ಡೊಕ್ರೆಲ್(14), ಡೆಲಾನಿ(9) ಬಂದಷ್ಟೇ ಬೇಗ ಪೆವಿಲಿಯನ್ ಸೇರಿಕೊಂಡರು. ಒಂದೆಡೆ ವಿಕೆಟ್ ಬೀಳುತ್ತಿದ್ದರು ಜವಾಬ್ದಾರಿ ಆಟವಾಡಿದ ಪೌಲ್ ಸ್ಟಿರ್ಲಿಂಗ್(34) ಹಾಗೂ ಹ್ಯಾರಿ ಟೆಕ್ಟರ್(45) ತಂಡ ಗೌರವಯುತ ಮೊತ್ತ ಕಲೆಹಾಕಲು ಕಾರಣರಾದರು. ಶ್ರೀಲಂಕಾ ಪರ ತೀಕ್ಷಣ ಹಾಗೂ ಹಸರಂಗ ತಲಾ 2 ವಿಕೆಟ್ ಪಡೆದರೆ, ಫೆರ್ನಾಂಡೋ, ಕುಮಾರ, ಕರುಣಾರತ್ನೆ ಹಾಗೂ ಧನಂಜಯ ಡಿಸಿಲ್ವಾ ತಲಾ 1 ವಿಕೆಟ್ ಪಡೆದರು.
ಲಂಕಾ ಬ್ಯಾಟಿಂಗ್ ಅಬ್ಬರ:
ಐರ್ಲೆಂಡ್ ನೀಡಿದ 128 ರನ್‌ಗಳ ಸುಲಭದ ಗುರಿ ಬೆನ್ನತ್ತಿದ ಶ್ರೀಲಂಕಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಲಂಕಾ ಪರ ಇನ್ನಿಂಗ್ಸ್ ಆರಂಭಿಸಿದ ಕುಸಲ್ ಮೆಂಡಿಸ್, 43 ಬಾಲ್‌ಗಳಲ್ಲಿ 5 ಬೌಂಡರಿ, 3 ಸಿಕ್ಸ್ ಮೂಲಕ ಅಜೇಯ 68 ರನ್‌ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಇವರಿಗೆ ಉತ್ತಮ ಸಾಥ್ ನೀಡಿದ ಧನಂಜಯ ಡಿಸಿಲ್ವಾ(31) ಹಾಗೂ ಚರಿತ್ ಅಸಲಂಕ(31*) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಐರ್ಲೆಂಡ್ ಪರ ಗೆರತ್ ಡೆಲಾನಿ 1 ವಿಕೆಟ್ ಪಡೆದುಕೊಂಡರು. ಶ್ರೀಲಂಕಾ ಗೆಲುವಿಗೆ ಕಾರಣವಾದ ಕುಸಲ್ ಮೆಂಡಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.