ಆರಂಭಿಕರಾದ ಡೆವಾನ್ ಕಾನ್ವೆ(Devon Conway)(92*) ಬಿರುಸಿನ ಬ್ಯಾಟಿಂಗ್ ಹಾಗೂ ಫಿನ್ ಅಲೆನ್(Finn Allen)(42) ಜವಾಬ್ದಾರಿಯುತ ಆಟದಿಂದ ಟಿ20 ವಿಶ್ವಕಪ್(T20 World Cup) ಟೂರ್ನಿಯ ಸೂಪರ್-12 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿ಼ಲೆಂಡ್ 200 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಸಿಡ್ನಿ ಕ್ರಿಕೆಟ್ ಮೈದಾನ(Sydney Cricket Ground)ದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿ಼ಲೆಂಡ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಪರಿಣಾಮ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್‌ಗಳ ಉತ್ತಮ ಮೊತ್ತ ಕಲೆಹಾಕಿದೆ. ನ್ಯೂಜಿ಼ಲೆಂಡ್ ಪರ ಡೆವಾನ್ ಕಾನ್ವೆ(92*) ಅತ್ಯುತ್ತಮ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು.
ಕಿವೀಸ್ ಉತ್ತಮ ಆರಂಭ:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ನ್ಯೂಜಿ಼ಲೆಂಡ್ ಉತ್ತಮ ಆರಂಭ ಪಡೆಯಿತು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಫಿನ್ ಅಲೆನ್(42) ಹಾಗೂ ಕಾನ್ವೆ(92*) ಮೊದಲ ವಿಕೆಟ್‌ಗೆ 56 ರನ್‌ಗಳ ಉತ್ತಮ ಜೊತೆಯಾಟವಾಡಿದರು. ಆರಂಭದಿಂದಲೇ ಸ್ಪೋಟಕ ಆಟವಾಡಿದ ಫಿನ್ ಅಲೆನ್, ಕೇವಲ 16 ಬಾಲ್‌ಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಮೂಲಕ 42 ರನ್‌ಗಳಿಸಿ ಹೊರ ನಡೆದರು.
ಕಾನ್ವೆ ಬೊಂಬಾಟ್ ಆಟ:
ಫಿನ್ ಅಲೆನ್ ಔಟಾದ ಬಳಿಕ ಬಿರುಸಿನ ಆಟಕ್ಕೆ ಮುಂದಾದ ಡೆವಾನ್ ಕಾನ್ವೆ, ಆಸ್ಟ್ರೇಲಿಯಾ ಬೌಲರ್‌ಗಳ ಮೇಲೆ ಸಂಪೂರ್ಣ ಸಂಪೂರ್ಣ ಹಿಡಿತ ಸಾಧಿಸಿದರು. ಇನ್ನಿಂಗ್ಸ್‌ನ ಕೊನೆಯ ಓವರ್‌ವರೆಗೂ ನೆಲಕಚ್ಚಿ ಆಟವಾಡಿದ ಕಾನ್ವೆ, 58 ಬಾಲ್‌ಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಅಜೇಯ 92 ರನ್‌ಗಳಿಸಿದರು. ಇವರಿಗೆ ನಾಯಕ ಕೇನ್ ವಿಲಿಯಂಸನ್(23), ಗ್ಲೆನ್ ಫಿಲಿಪ್ಸ್(12) ಹಾಗೂ ಜಿಮ್ಮಿ ನೀಶಾಮ್ 26*(13) ಉತ್ತಮ ಸಾಥ್ ನೀಡಿದರು. ಆಸ್ಟ್ರೇಲಿಯಾ ಪರ ಜೋಶ್ ಹೆಜಲ್ವುಡ್ 2 ವಿಕೆಟ್ ಪಡೆದರೆ, ಆಡಂ ಜ್ಹಂಪ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
=================