T20 CWC 2022 ಬೌಲರ್ಗಳ ಸಂಘಟಿತ ಪ್ರದರ್ಶನ ಹಾಗೂ ಆರಂಭಿಕ ಬ್ಯಾಟ್ಸ್ಮನ್ ಮ್ಯಾಕ್ಸ್ ಓಡೌಡ್(52) ಅವರ ಅರ್ಧಶತಕದ ನೆರವಿನಿಂದ ಜಿಂಬಾಬ್ವೆ(Zimbabwe) ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿದ ನೆದರ್ಲೆಂಡ್ಸ್(Netherlands) ಟಿ20 ವಿಶ್ವಕಪ್ನ ಸೂಪರ್-12ನಲ್ಲಿ ಮೊದಲ ಗೆಲುವು ದಾಖಲಿಸಿದೆ.
ಅಡಿಲೇಡ್ ಓವಲ್(Adelaide Oval)ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಜಿಂಬಾಬ್ವೆ, ನೆದರ್ಲೆಂಡ್ಸ್ ಬೌಲಿಂಗ್ ದಾಳಿತೆ ತತ್ತರಿಸಿತು. ಪರಿಣಾಮ 19.2 ಓವರ್ಗಳಲ್ಲಿ 117 ರನ್ಗಳಿಗೆ ಸರ್ವಪತನ ಕಂಡಿತು. ಈ ಸವಾಲನ್ನ ಚೇಸ್ ಮಾಡಿದ ನೆದರ್ಲೆಂಡ್ಸ್ 18 ಓವರ್ಗಳಲ್ಲಿ 5 ವಿಕೆಟ್ಗೆ 120 ರನ್ಗಳಿಸುವ ಮೂಲಕ ಗೆಲುವು ಸಾಧಿಸಿತು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ತಂಡದ ಅಗ್ರ ಕ್ರಮಾಂಕದ ಮಧವೇರೆ(1), ಕ್ರೇಗ್ ಎರ್ವಿನ್(3) ಹಾಗೂ ಚೆಕಬ್ವಾ(5) ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರು. ನಂತರ ಜೊತೆಯಾದ ಸೆನ್ ವಿಲಿಯಮ್ಸ್(28) ಹಾಗೂ ಸಿಕಂದರ್ ರಾಜಾ಼(40) ಉತ್ತಮ ಆಟವಾಡಿದ ಪರಿಣಾಮ ತಂಡದ ಮೊತ್ತ 100 ರನ್ಗಳ ಗಡಿದಾಟುವಂತೆ ಮಾಡಿದರು. ಇವರಿಬ್ಬರ ನಂತರ ಬಂದ ಬ್ಯಾಟ್ಸ್ಮನ್ಗಳು ತಂಡಕ್ಕೆ ಆಸರೆಯಾಗಲಿಲ್ಲ. ನೆದರ್ಲೆಂಡ್ಸ್ ಪರ ವ್ಯಾನ್ ಮೆಕ್ರೇನ್ 3, ಬ್ರೆಂಡನ್ ಗ್ಲೋವರ್, ವ್ಯಾನ್ ಬೀಕ್ ಹಾಗೂ ಬಾಸ್ ಡಿಲಿಡೆ ತಲಾ 2 ವಿಕೆಟ್ ಪಡೆದು ಮಿಂಚಿದರು.
ಜಿಂಬಾಬ್ವೆ ನೀಡಿದ 118 ರನ್ಗಳ ಸುಲಭದ ಟಾರ್ಗೆಟ್ ಚೇಸ್ ಮಾಡಿದ ನೆದರ್ಲೆಂಡ್ಸ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿತು. ಆದರೆ ಜವಾಬ್ದಾರಿಯುತ ಆಟವಾಡಿದ ಆರಂಭಿಕ ಬ್ಯಾಟ್ಸ್ಮನ್ ಮ್ಯಾಕ್ಸ್ ಓಡೌಡ್, 47 ಬಾಲ್ಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸ್ ಮೂಲಕ 52 ರನ್ಗಳ ಅರ್ಧಶತಕದ ಕಾಣಿಕೆ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಟಾಮ್ ಕೂಪರ್(32) ಉಪಯುಕ್ತ ಕಾಣಿಕೆ ನೀಡುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಜಿಂಬಾಬ್ವೆ ಪರ ರಿಚರ್ಡ್ ನಗರ್ವಾ, ಮುಜರ್ಬಾನಿ ತಲಾ 2 ವಿಕೆಟ್ ಪಡೆದರೆ, ಜುಂಗ್ವೆ 1 ವಿಕೆಟ್ ಪಡೆದರು.
ಇದನ್ನೂ ಓದಿ https://sportskarnataka.com/t20i-cwc-2022-ko…m-with-3rd-fifty/