ಟಿ20 ವಿಶ್ವಕಪ್‌ನ ಮಹತ್ವದ ಸೂಪರ್-12 ಪಂದ್ಯದಲ್ಲಿ ನ್ಯೂಜಿ಼ಲೆಂಡ್(New Zealand) ವಿರುದ್ಧ 20 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್(England ಟೂರ್ನಿಯ ಸೆಮಿಫೈನಲ್(Semi Finals) ರೇಸ್‌ನಲ್ಲಿ ಜೀವಂತವಾಗಿದೆ. ಬ್ರಿಸ್ಬೆನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 179 ರನ್‌ಗಳಿಸಿತು. ಈ ಟಾರ್ಗೆಟ್ ಚೇಸ್ ಮಾಡಿದ ನ್ಯೂಜಿ಼ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್‌ಗಳಿಸುವ ಮೂಲಕ 20 ರನ್‌ಗಳ ಸೋಲನುಭವಿಸಿತು. ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್(73) ರನ್‌ಗಳಿಸಿ ಮಿಂಚಿದರೆ. ನ್ಯೂಜಿ಼ಲೆಂಡ್ ಪರ ಗ್ಲೆನ್ ಫಿಲಿಪ್ಸ್(62) ರನ್‌ಗಳಿಸಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.
ಈ ಗೆಲುವಿನೊಂದಿಗೆ 5 ಅಂಕದೊಂದಿಗೆ ಗ್ರೂಪ್-1ರಲ್ಲಿ ಇಂಗ್ಲೆಂಡ್ ತಂಡ 2ನೇ ಸ್ಥಾನದಲ್ಲಿದ್ದು, ಸೆಮಿಫೈನಲ್ ರೇಸ್‌ನಲ್ಲಿ ಜೀವಂತವಾಗಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಸೋಲು ಕಂಡಿರುವ ನ್ಯೂಜಿ಼ಲೆಂಡ್, 5 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ. ಅತಿಥೇಯ ಆಸ್ಟ್ರೇಲಿಯಾ ಸಹ 5 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. ಉಳಿದಂತೆ ಶ್ರೀಲಂಕಾ ತಂಡ 4 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ಹೀಗಾಗಿ ಗ್ರೂಪ್-1ರಲ್ಲಿ ಈ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿವೆ.
ಇಂಗ್ಲೆಂಡ್‌ಗೆ ಬಟ್ಲರ್ ಆಸರೆ:
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ಗೆ ನಾಯಕ ಜೋಸ್ ಬಟ್ಲರ್(73) ಹಾಗೂ ಅಲೆಕ್ಸ್ ಹೇಲ್ಸ್(52) ಮೊದಲ ವಿಕೆಟ್‌ಗೆ 81 ರನ್ ಕಲೆಹಾಕಿ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರ ಹೊರತಾಗಿ ಲಿವಿಂಗ್‌ಸ್ಟೋನ್(20) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಆದರೆ ಉಳಿದವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಬರಲಿಲ್ಲ. ಪರಿಣಾಮ ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 179 ರನ್‌ಗಳಿಸಿತು. ಕಿವೀಸ್ ಪರ ಫೆರ್ಗುಸನ್ 2 ವಿಕೆಟ್ ಪಡೆದರೆ, ಸೌಥಿ, ಸ್ಯಾಂಟ್ನರ್ ಹಾಗೂ ಸೋಧಿ ತಲಾ 1 ವಿಕೆಟ್ ಪಡೆದರು.
ಫಿಲಿಪ್ಸ್ ವ್ಯರ್ಥ ಹೋರಾಟ:
ಇಂಗ್ಲೆಂಡ್ ನೀಡಿದ 180 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ನ್ಯೂಜಿ಼ಲೆಂಡ್ ಉತ್ತಮ ಆರಂಭ ಪಡೆಯಲಿಲ್ಲ. ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಡೆವಾನ್ ಕಾನ್ವೆ(3) ಹಾಗೂ ಫಿನ್ ಅಲೆನ್(16) ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ನಂತರ ಜೊತೆಯಾದ ನಾಯಕ ಕೇನ್ ವಿಲಿಯಂಸನ್(40) ಹಾಗೂ ಗ್ಲೆನ್ ಫಿಲಿಪ್ಸ್(60) ಉತ್ತಮ ಬ್ಯಾಟಿಂಗ್ ಮೂಲಕ ಗೆಲುವಿನ ಆಸೆ ಜೀವಂತ ಇರಿಸಿದರು. ಆದರೆ ಇವರಿಬ್ಬರ ವಿಕೆಟ್ ಪತನದ ನಂತರ ಬಂದ ಯಾರೊಬ್ಬರು ಜವಾಬ್ದಾರಿಯುತ ಆಟವಾಡದ ಪರಿಣಾಮ ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್‌ಗಳಿಸುವ ಮೂಲಕ 20 ರನ್‌ಗಳ ಸೋಲೊಪ್ಪಿಕೊಂಡಿತು. ಇಂಗ್ಲೆಂಡ್ ಪರ ವೋಕ್ಸ್, ಕರ್ರನ್ ತಲಾ 2 ವಿಕೆಟ್ ಪಡೆದರೆ, ಮಾರ್ಕ್ ವುಡ್ ಹಾಗೂ ಸ್ಟೋಕ್ಸ್ ತಲಾ 1 ವಿಕೆಟ್ ಪಡೆದರು. ಭರ್ಜರಿ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ ತಂಡದ ಗೆಲುವಿನಲ್ಲಿ ಮಿಂಚಿದ ಜಾಸ್ ಬಟ್ಲರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.