ಕ್ರಿಕೆಟ್‌ನಲ್ಲಿ ‘ಕ್ಯಾಚಸ್ ವಿನ್ಸ್ ಮ್ಯಾಚಸ್ʼ ಅನ್ನೋ ಮಾತು ಸಾಕಷ್ಟು ಬಾರಿ ಕೇಳಿ ಬರುತ್ತೆ. ಈ ಮಾತು ಇದೀಗ ಶ್ರೀಲಂಕಾ(Sri Lanka) ಪಾಲಿಗೆ ಅಕ್ಷರಶಃ ಸತ್ಯವೆನಿಸಿದೆ. ನ್ಯೂಜಿ಼ಲೆಂಡ್(New Zealand) ವಿರುದ್ಧ ನಡೆದ ಪಂದ್ಯದಲ್ಲಿ ಲಂಕಾ ಆಟಗಾರರು ಕ್ಯಾಚ್‌ಗಳನ್ನ ಕೈಚೆಲ್ಲಿದ್ದರ ಪರಿಣಾಮ ಸೋಲಿನ ಬೆಲೆ ಕಟ್ಟಬೇಕಾಗಿ ಬಂದಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ(Sydney Cricket Ground) ನಡೆದ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಅದ್ಭುತ ಆರಂಭ ಪಡೆದಿದ್ದ ಶ್ರೀಲಂಕಾ, 15 ರನ್‌ಗಳಿಕೆ ಕಿವೀಸ್‌ನ 3 ವಿಕೆಟ್ ಪಡೆದು ಮೇಲುಗೈ ಸಾಧಿಸಿತ್ತು. ಇದಾದ ಬಳಿಕ ಗ್ಲೆನ್ ಫಿಲಿಪ್ಸ್ ನೀಡಿದ ಸುಲಭದ ಕ್ಯಾಚನ್ನು ಲಾಂಗ್ ಆಫ್‌ನಲ್ಲಿ ಪತುಮ್ ನಿಸ್ಸಂಕ ಕೈಚಲ್ಲಿಸಿದ್ದರು. ಇದಾದ 6 ಓವರ್‌ಗಳ ನಂತರದ ಶನಕಾ ಸಹ ಫಿಲಿಪ್ಸ್ ನೀಡಿದ ಮತ್ತೊಂದು ಕ್ಯಾಚ್ ಕೈಚಲ್ಲಿದರು. ಈ ಎರಡು ಜೀವಧಾನದ ಲಾಭ ಪಡೆದ ಗ್ಲೆನ್ ಫಿಲಿಪ್ಸ್, ಬಿರುಸಿನ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿ ಅಬ್ಬರಿಸಿದರಲ್ಲದೇ, ನ್ಯೂಜಿ಼ಲೆಂಡ್ ಗೆಲುವಿಗೆ ಕಾರಣರಾದರು.
ಕಿವೀಸ್ ವಿರುದ್ಧದ ಸೋಲಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಶ್ರೀಲಂಕಾ ತಂಡದ ನಾಯಕ ದಸುನ್ ಶನಕಾ, ಪಂದ್ಯದಲ್ಲಿ ಕೈಬಿಟ್ಟ ಕ್ಯಾಚ್‌ಗಳು, ಗೇಮ್ ಚೇಂಜರ್ ಎಂದು ನಾನು ಭಾವಿಸುತ್ತೇನೆ. ನಾವು ಆ ಕ್ಯಾಚ್‌ಗಳನ್ನ ಪಡೆದಿದ್ದರೆ ನ್ಯೂಜಿ಼ಲೆಂಡ್ ತಂಡವನ್ನ 130, 140 ರನ್‌ಗೆ ಕಟ್ಟಿಹಾಕಬಹುದಿತ್ತು. ಜೊತೆಗೆ ಬ್ಯಾಟಿಂಗ್‌ನಲ್ಲೂ ನಿರಾಶಾದಾಯಕ ಪ್ರದರ್ಶನ ನೀಡಿದೆವು, ಇದು ನಮ್ಮ ಅತ್ಯಂತ ಕೆಟ್ಟ ಪ್ರದರ್ಶನವಾಗಿತ್ತು ಎಂದು ಬೇಸರ ಹೊರಹಾಕಿದ್ದಾರೆ.
ಶನಕಾ ಮತ್ತು ರಾಜಪಕ್ಸೆ ಹೊರತುಪಡಿಸಿ, ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿಯನ್ನು ತಲುಪಲಿಲ್ಲ. ನಾವು ಆರಂಭದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಲಿಲ್ಲ. 160 ರನ್ ಚೇಸ್ ಮಾಡುವಾಗ ಬಾಲ್‌ನ ವಿರುದ್ಧ ನೇರವಾಗಿ ಆಡಬೇಕಿದ್ದರು, ನಮ್ಮ ಆಟ ಉತ್ತಮವಾಗಿರಲಿಲ್ಲ ಎಂದು ಲಂಕಾ ನಾಯಕ ತಂಡದ ಸೋಲಿನ ಪರಾಮರ್ಶೆ ಮಾಡಿದ್ದಾರೆ. ಸೆಮಿಸ್‌ಗೆ ಹೋಗಲು, ಶ್ರೀಲಂಕಾ ತನ್ನ ಉಳಿದ ಎರಡು ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿ ಸಿಲುಕಿದೆ.