ಇಂಡೋ-ಪಾಕ್ ಕದನದ ಸದ್ದಿನ ನಡುವೆ ಐರ್ಲೆಂಡ್ ಮತ್ತು ಶ್ರೀಲಂಕಾ (Ire VS Sl) ನಡುವಿನ ಮ್ಯಾಚ್ ಬಗ್ಗೆ ಮರೆತೇ ಹೋಗಿದೆ. ಆಸ್ಟ್ರೇಲಿಯಾದ ಇನ್ನೊಂದು ಭಾಗವಾದ ಹೊಬಾರ್ಟ್ನಲ್ಲಿ (Hobart) ಶ್ರೀಲಂಕಾ (Srilanka) ಮತ್ತು ಐರ್ಲೆಂಡ್ (Ireland) ಅಖಾಡಕ್ಕೆ ಇಳಿಯಲಿವೆ. ಈ ಎರಡೂ ತಂಡಗಳು ಅರ್ಹತಾ ಸುತ್ತಿನಿಂದ ಮೈನ್ ಗ್ರೂಪ್ಗೆ ಕ್ವಾಲಿಫೈ ಆಗಿರುವ ತಂಡಗಳಾಗಿರುವುದರಿಂದ ಈ ಹೋರಾಟ ಕುತೂಹಲ ಕೆರಳಿಸಿದೆ.
ಶ್ರೀಲಂಕಾ (SL), ನಮೀಬಿಯಾ (Namibia) ವಿರುದ್ಧದ ಶಾಕಿಂಗ್ ಸೋಲಿನ ಬಳಿಕ ಚೇತರಿಸಿಕೊಂಡು ಸತತ ಎರಡು ಪಂದ್ಯಗಳನ್ನು ಗೆದ್ದಿದೆ. ಐರ್ಲೆಂಡ್ (IRE) ವೆಸ್ಟ್ಇಂಡೀಸ್ (Westindies) ತಂಡವನ್ನೇ ಸೋಲಿಸಿ ಈ ಹಂತಕ್ಕೇರಿದೆ. ಹೀಗಾಗಿ ಎರಡೂ ತಂಡಗಳ ತಾಕತ್ತಿನ ಬಗ್ಗೆ ಎರಡು ಮಾತಿಲ್ಲ. ಶ್ರೀಲಂಕಾ ತಂಡಕ್ಕೆ ಬ್ಯಾಟಿಂಗ್ನಲ್ಲಿ ಕುಸಾಲ್ ಮೆಂಡಿಸ್, ಪಥುಮ್ ನಿಸ್ಸಾಂಕಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸ, ಧನಂಜಯ ಡಿ ಸಿಲ್ವಾರಂತಹ ಬ್ಯಾಟಿಂಗ್ ತಾರೆಗಳಿದ್ದಾರೆ. ಹಸರಂಗ ಡಿ ಸಿಲ್ವಾ, ನಾಯಕ ದಾಸುನ್ ಶಣಕ ಆಲ್ರೌಂಡರ್ ಕೋಟಾ ಭರ್ತಿ ಮಾಡುತ್ತಿದ್ದಾರೆ. ಕರುಣಾರತನೆ, ಮಹೀಶ್ ತೀಕ್ಷಣರಂತಹ ಬೌಲರ್ಗಳು ಎದುರಾಳಿಗೆ ಸಮಸ್ಯೆ ತರುವ ಶಕ್ತಿ ಹೊಂದಿದ್ದಾರೆ.
ಐರ್ಲೆಂಡ್ 2008ರ ಬಳಿಕ ಮೊದಲ ಬಾರಿಗೆ ಟಿ20 ವಿಶ್ವಕಪ್ನ (T20 Worldcup) ಮೈನ್ ಲೀಗ್ ಪ್ರವೇಶಿಸಿದೆ. ಟಿ20 ಚಾಂಪಿಯನ್ ತಂಡವಾಗಿದ್ದ ವೆಸ್ಟ್ಇಂಡೀಸ್ ತಂಡಕ್ಕೆ ಶಾಕ್ ನೀಡಿದ್ದ ಈ ತಂಡ ಕೂಡ ಟಿ೨೦ ಸ್ಪೆಷಲಿಸ್ಟ್ಗಳನ್ನು ಹೊಂದಿದೆ. ಪಾಲ್ಸ್ಟಿರ್ಲಿಂಗ್, ಆಂಡಿ ಬಾಲ್ಬಿರ್ನಿ, ಲೋರ್ಕನ್ ಟಕ್ಕರ್, ಹೆನ್ರಿ ಟೆಕ್ಟರ್ರಂತಹ ಸ್ಫೋಟಕ ಬ್ಯಾಟರ್ಗಳಿದ್ದಾರೆ. ಕರ್ಟಿಸ್ ಕ್ಯಾಂಪರ್, ಗೆರತ್ ಡಿಲಾನಿ ಮತ್ತು ಮಾರ್ಕ್ ಅಡೈರ್ ಬೌಲಿಂಗ್ ಜೊತೆ ಬ್ಯಾಟಿಂಗ್ನಲ್ಲೂ ಮಿಂಚಬಲ್ಲರು. ಜೋಶ್ ಲಿಟಲ್, ಜಾರ್ಜ್ ಡಾಕೆರಲ್ ಮತ್ತು ಸಿಮಿಸಿಂಗ್ ಬೌಲಿಂಗ್ನಲ್ಲಿ ಪಂದ್ಯ ಗೆಲ್ಲಿಸಬಲ್ಲರು.
ಹೊಬಾರ್ಟ್ ಪಿಚ್ ವೇಗದ ಬೌಲರ್ಗಳಿಗೆ ನೆರವು ನೀಡಲಿದೆ. ಹೀಗಾಗಿ ಎರಡೂ ತಂಡಗಳ ಫಾಸ್ಟ್ ಬೌಲರ್ಗಳ ಪ್ರದರ್ಶನ ಪಂದ್ಯದ ಫಲಿತಾಂಶ ನಿರ್ಧರಿಸಬಲ್ಲದು.