Ind VS Pak ಕ್ರಿಕೆಟ್ ಮೈದಾನ ರಣಾಂಗಣವಾಗಿ ಬದಲಾಗುವ ಪಂದ್ಯವಿದು. ಆಟಗಾರರ ಒಂದು ಸಣ್ಣ ತಪ್ಪು ಸಾಕಷ್ಟು ಟೀಕೆಗಳಿಗೆ ಕಾರಣವಾಗುತ್ತದೆ. ಒಂದು ಅದ್ಭುತ ಪ್ರದರ್ಶನ ದೊಡ್ಡ ನೆನಪುಗಳನ್ನು ಕಟ್ಟಿ ಕೊಡುತ್ತದೆ. ಭಾರತ (Ind VS Pak) ಮತ್ತು ಪಾಕ್ (Pak) ತಂಡಗಳು ಮೊದಲ ವಿಶ್ವಕಪ್‌ನಿಂದಲೇ ಮುಖಾಮುಖಿಯಾಗಿವೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ಭಾರತ (India) ಎಲ್ಲಾ ಕಡೆ ಟೀಮ್ ಇಂಡಿಯಾವೇ (Team India) ಪಾಕ್ (Pakistan) ವಿರುದ್ಧ ಮೇಲುಗೈ ಸಾಧಿಸಿತ್ತು. ಆದರೆ ವಿಶ್ವಕಪ್‌ನಲ್ಲಿನ (Wolrdcup) ಪಾಕ್ ವಿರುದ್ಧದ ಅಜೇಯ ಓಟಕ್ಕೆ ದುಬೈನಲ್ಲಿ ಅಂತ್ಯ ಕಂಡಿದೆ.
ಏಕದಿನ ವಿಶ್ವಕಪ್ (ODI Worldcup) ಹಾಗೂ ಟಿ20 ವಿಶ್ವಕಪ್ (T20 Worldcup) ಸೇರಿದಂತೆ ಭಾರತ ಪಾಕ್ ವಿರುದ್ಧ ಸೋತಿದ್ದು ಒಂದೇ ಬಾರಿ. ಹೀಗಾಗಿ ಭಾರತ ಮತ್ತೆ ಫೆವರೀಟ್ ಟೀಮ್ ಅನ್ನುವುದರಲ್ಲಿ ಎರಡು ಮಾತಿಲ್ಲ. ಭಾರತ ಮತ್ತು ಪಾಕ್ ನಡುವಿನ ಟಿ20 ಮಹಾಸಮರದ ಫಲಿತಾಂಶಗಳ ಮೆಲುಕು ಹಾಕುವ ಟೈಮ್ ಇದಾಗಿದೆ.


2012: ಕೊಲೊಂಬೊ: ಭಾರತಕ್ಕೆ 8 ವಿಕೆಟ್‌ಗಳ ಜಯ
2014: ಢಾಕಾ: 7 ವಿಕೆಟ್‌ಗಳಿಂದ ಗೆದ್ದು ಬೀಗಿದ ಟೀಮ್ ಇಂಡಿಯಾ
2016 ಕೊಲ್ಕತ್ತಾ: 6 ವಿಕೆಟ್ ಜಯ ಸಾಧಿಸಿ ಮಿಂಚಿದ ಭಾರತ
2021: ದುಬೈ: ಪಾಕಿಸ್ತಾನಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ