T20 WorldCup- ಬಾಂಗ್ಲಾದೇಶ ವಿರುದ್ಧ ಟಿ20 ವಿಶ್ವಕಪ್ನಲ್ಲಿ ದ.ಆಪ್ರಿಕಾ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಜೊತೆಗೆ ಗ್ರೂಪ್ 2ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಸಿಡ್ನಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ನಿಗದತಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಕೆಲ ಹಾಕಿತು. ಹರಿಣಗಳು ಬೃಹತ್ ಮೊತ್ತ ಪೇರಿಸಲು ಕಾರಣವಾಗಿದ್ದು ರೀಲಿ ರೊಸೊ. ಮೂರನೆ ಕ್ರಮಾಂಕದಲ್ಲಿ ಬಂದ ರೊಸೊ ಸ್ಪೋಟಕ ಬ್ಯಾಟಿಂಗ್ ಮಾಡಿದರು. 30 ಎಸೆತದಲ್ಲಿ ರೊಸೊ ಅರ್ಧ ಶತಕ ಸಿಡಿಸಿದರು,ನಂತರ ಮುಂದುವರೆದು 52ನೇ ಎಸೆತದಲ್ಲಿ ಶತಕ ಸಿಡಿಸಿದರು.
ಇದರೊಂದಿಗೆ ರೊಸೊ ಟಿ20 ವಿಶ್ವಕಪ್ನಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದರು. ಜೊತೆಗೆ ಟಿ20ಯಲ್ಲಿ ಸತತ ಎರಡನೆ ಶತಕ ಸಿಡಿಸಿದ ಎರಡನೆ ಎಡಗೈ ಬ್ಯಾಟರ್ ಎಂಬ ಹಿರಮೆಗೆ ಪಾತ್ರರಾದರು.
ಇದಕ್ಕೂ ಮುನ್ನ ಫ್ರಾನ್ಸ್ ನ ಗುಸ್ತಾವ್ ಮೆಕ್ಕಿಯೊನ್ ಟಿ20 ಆವೃತ್ತಿಯಲ್ಲಿ ಸತತ ಎರಡು ಶತಕ ಸಿಡಿಸಿ ದಾಖಲೆ ಬರೆದಿದ್ದರು.
ರೊಸೊ ಒಟ್ಟು 56 ಎಸೆತದಲ್ಲಿ 7 ಬೌಂಡರಿ 8 ಸಿಕ್ಸರ್ ಸಿಡಿಸಿ 109 ರನ್ ಚಚ್ಚಿದರು.