T20 World Cup – ಟಿ20 ವಿಶ್ವಕಪ್ನ 24ನೇ ಟಿ20 ಪಂದ್ಯದಲ್ಲಿಂದು ಪಾಕಿಸ್ತಾನ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.
ಪರ್ತ್ ಮೈದಾನದಲ್ಲಿಂದು ಗ್ರೂಪ್ 2ರಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ವಿರೋಚಿತ ಸೋಲು ಅನುಭವಿಸಿ ಆಘಾತಕೊಳಗಾಗಿದೆ.
ಇನ್ನು ಜಿಂಬಾಬ್ವೆ ತಂಡ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಸೋಲುತಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದಾಗಿದ್ದರಿಂದ 1 ಅಂಕ ಪಡೆದು ನಿಟ್ಟುಸಿರು ಬಿಟ್ಟಿದೆ.
ಪಾಕಿಸ್ತಾನ ತಂಡ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಿದೆ. ಮೊನ್ನೆಯ ಹೈವೋಲ್ಟೇಜ್ ಪಂದ್ಯದಲ್ಲಿ ಪಾಖಿಸ್ತಾನ ತಂಡ ನಾಲ್ಕನೆ ವೇಗಿಯನ್ನು ತಂಡಕ್ಕೆ ಸೇರಿಸಿಕೊಂಡಿರಲಿಲ್ಲ.
ಕೊನೆಯ ಓವರ್ ಮಾಡಿದ ಮೊಹ್ಮದ್ ನವಾಜ್ಗೆ ಅದೃಷ್ಟ ಕೈಕೊಟ್ಟಿತ್ತು. ಪಂದ್ಯ ಮುಗಿದ ಬಳಿಕ ನಾಯಕ ಬಾಬರ್ ಅಜಂ ಆಟಗಾರರಿಗೆ ಆತ್ಮವಿಶ್ವಾಸ ತುಂಬಿದರು.
ಭಾರತ ವಿರುದ್ಧ ಸೋತಿದ್ದರೂ ಪಾಕ್ ತಂಡ ಉತ್ತಮವಾಗಿದ್ದು ಎರಡನೆ ಅತ್ಯುತ್ತಮ ತಂಡವಾಗಿದೆ.
ಇನ್ನು ಜಿಂಬಾಬ್ವೆ ತಂಡ ಕಳೆದ ಎರಡು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಪಾಕ್ ತಂಡಕ್ಕೆ ಒಳ್ಳೆಯ ಸವಾಲು ನೀಡುವ ತಾಕತ್ತು ಹೊಂದಿದೆ.
ಪರ್ತ್ ಮೈದಾನದಲ್ಲಿ ಜಿಂಬಾಬ್ವ ತಂಡ 9 ಟಿ20 ಪಂದ್ಯಗಳನ್ನಾಡಿದ ಅನುಭವ ಹೊಂದಿದೆ. ರಾವಲ್ಪಿಂಡಿ ಹಾಗೂ ಹರಾರೆಯಲ್ಲಿ ನಡೆದಿದ್ದ ಪಂದ್ಯದಲ್ಲಿ ಜಿಂಬಾಬ್ವೆ ಪಾಕ್ ವಿರುದ್ಧ ಟೈ ಮಾಡಿಕೊಂಡಿತ್ತು.