T20 World cup – ಕೊನೆಯ ಎಸೆತದಲ್ಲಿ ಜಿಂಬಾಬ್ವೆ ತಂಡ ಪಾಕಿಸ್ತಾನ ವಿರುದ್ಧ 1 ರನ್ಗಳ ರೋಚಕ ಗೆಲುವು ದಾಖಲಿಸಿತು. ಪಾಕಿಸ್ತಾನ ವಿರೋಚಿತ ಸೋಲು ಅನುಭವಿಸಿತು. ಮೊನ್ನೆ ಭಾರತ ವಿರುದ್ಧ ಸೋಲು ಅನುಭವಿಸಿದ್ದ ಪಾಕಿಸ್ತಾನ ತಂಡ ಜಿಂಬಾಬ್ವೆ ವಿರುದ್ಧವೂ ಮುಗ್ಗರಿಸಿ ಆಘಾತ ಅನುಭವಿಸಿತು.
ಸತತ ಎರಡು ಪಂದ್ಯಗಳನ್ನು ಕೈಚೆಲ್ಲಿರುವುದರಿಂದ ಪಾಕ್ ತಂಡದ ಸೆಮಿಸ್ ಹಾದಿ ಬಹುತೇಕ ಅಂತ್ಯವಾದಂತಿದೆ.
ಪರ್ತ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು. ಪಾಕಿಸ್ತಾನ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಕಲೆ ಹಾಕಿತು.
131 ರನ್ ಗುರಿ ಬೆನ್ನತ್ತಿದ ಪಾಕ್ ತಂಡಕ್ಕೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಪಾಕ್ ತಂಡಕ್ಕೆ ಜಿಂಬಾಬ್ವೆ ವೇಗಿಗಳು ಶಾಕ್ ಮೇಲೆ ಶಾಕ್ ಕೊಟ್ಟರು. ಮೊಹ್ಮದ್ ರಿಜ್ವಾನ್ (14ರನ್) ವೇಗಿ ಮುಜಾರ್ಬಾನಿ ಎಸೆತದಲ್ಲಿ ಬೌಲ್ಡ್ ಆದರು.ನಾಯಕ ಬಾಬರ್ ಅಜಂ (4ರನ್), ಶಾನ್ ಮಸೂದ್ 44 ರನ್, ಇಫ್ತಿಖರ್ ಅಹ್ಮದ್ 5 ರನ್,ಶಾಬಾದ್ ಖಾನ್ 17 ರನ್, ಮೊಹ್ಮದ್ ನವಾಜ್ 22 ರನ್, ಮೊಹ್ಮದ್ ವಾಸೀಮ್ 12 ರನ್ ಗಳಿಸಿದರು.
ಜಿಂಬಾಬ್ವೆ ಪರ ಸಿಕಂದರ್ ರಾಜಾ 25ಕ್ಕೆ 3, ಬ್ರಾಡ್ ಇವನ್ಸ್ 25ಕ್ಕೆ 2, ಲೂಕ್ ಜಾಗ್ವೆ 10ಕ್ಕೆ 1, ಮುಜಾರ್ಬಾನಿ 18ಕ್ಕೆ 1 ವಿಕೆಟ್ ಪಡೆದರು. 3 ವಿಕೆಟ್ ಪಡೆದ ಸಿಕಂದರ್ ರಾಜಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.