T20 World Cup ಮೊಹ್ಮದ್ ವಾಸೀಮ್ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಯುಎಇ ತಂಡ ನಮೀಬಿಯಾ ತಂಡವನ್ನು 7 ರನ್‍ಗಳ ಅಂತರದಿಂದ ರೋಚಕವಾಗಿ ಸೋಲಿಸಿದೆ. ಈ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ.
ಗುರುವಾರ ಇಲ್ಲಿನ ಗಿಲಾಂಗ್ ಮೈದಾನದಲ್ಲಿ ನಡೆದ ಮೊದಲ ಸುತ್ತಿನ ಎ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 148 ರನ್ ಕಲೆ ಹಾಕಿತು. ನಮೀಬಿಯಾ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141 ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು.
149 ರನ್ ಗುರಿ ಬೆನ್ನತ್ತಿದ ನಮೀಬಿಯಾ ಪರ ಮೈಕಲ್ ವಾನ್ 10, ಸ್ಟೀಫನ್ ಬಾರ್ಡ್ 4, ಜಾನ್ ನಿಕೊಲ್ 1, ನಾಯಕ ಗೆರಾರ್ಡ್ ಎರಸ್ಮಾಸ್ 16, ಜಾನ್ ಫ್ರೈಲಿಂಕ್ 14, ಜೆಜೆ ಸ್ಮಿತ್ 3 ರನ್ ಗಳಿಸಿದರು.
69 ರನ್‍ಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ 7ನೇ ಕ್ರಮಾಂಕದಲ್ಲಿ ಬಂದ ಡೇವಿಡ್ ವೈಸ್ ಸೋಟಕ ಬ್ಯಾಟಿಂಗ್ ಮಾಡಿ 3 ಬೌಂಡರಿ 3 ಸಿಕ್ಸರ್ ಸಿಡಿಸಿ 55 ರನ್ ಗಳಿಸಿದರು. ರುಬೆನ್ 25 ರನ್‍ಗಳಿಸಿದರು. ಕೊನೆಯ ಓವರ್‍ನಲ್ಲಿ ನಮೀಬಿಯಾಗೆ ಗೆಲ್ಲಲು 14 ರನ್ ಬೇಕಿತ್ತು. ನಮೀಬಿಯಾ 6 ರನ್ ಪೇರಿಸುವಲ್ಲಿ ಮಾತ್ರ ಶಕ್ತವಾಯಿತು.
ಯುಎಇ ಪರ ಬಸಿಲ್ ಹಮೀದ್ 17ಕ್ಕೆ 2, ಜಾಹೂರ್ ಖಾನ್ 20ಕ್ಕೆ2, ಜುನೈದ್ ಸಿದ್ದಿಕ್ 35ಕ್ಕೆ 1, ಕಾರ್ತಿಕ್ ಮೇಯಪ್ಪನ್ 34ಕ್ಕೆ 1, ಮೊಹ್ಮದ್ ವಾಸೀಮ್ 16ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಯುಎಇ ಪರ ಮೊಹ್ಮದ್ ವಾಸೀಮ್ 50 (41 ಎಸೆತ, 1 ಬೌಂಡರಿ, 3 ಸಿಕ್ಸರ್) ರನ್. ಅರವಿಂದ್ 21 ರನ್, ನಾಯಕ ರಿಜ್ವಾನ್ ಅಜೇಯ 43, ಬಸೀಲ್ ಹಮೀದ್ ಅಜೇಯ 25 ರನ್ ಗಳಿಸಿದರು.
ನಮೀಬಿಯಾ ಪರ ಬೆನ್ ಶಿಕೊಂಗೊ, ಡೇವಿಡ್ ವೈಸ್ ಹಾಗೂ ಬೆರ್ನಾರ್ಡ್ ತಲಾ 1 ವಿಕೆಟ್ ಪಡೆದರು. ಮೊಹ್ಮದ್ ವಾಸೀಮ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.