ಮೆಲ್ಬೋರ್ನ್ ನಲ್ಲಿ ನಡೆಯಬೇಕಿದ್ದ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ರದ್ದಾಗಿದೆ.
ಇದರೊಂದಿಗೆ ಎರಡನೆ ಪಂದ್ಯ ರದ್ದಾಂತಾಗಿದೆ. ಮೆಲ್ಬೋರ್ನ್ನಲ್ಲಿ ನಡೆಯಬೇಕಿದ್ದ ಪಂದ್ಯಕ್ಕೆ ಆರಂಭದಲ್ಲೆ ವಿಘ್ನ ಎದುರಾಯಿತು. ಕೊನೆಗೆ 5 ಓವರ್ ಪಂದ್ಯಗಳನ್ನು ನಡೆಸಲು ತೀರ್ಮಾನಿಸಲಾಯಿತು.ಮಳೆ ಬಿಡದ ಕಾರಣ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬರಬೇಕಾಯಿತು.
ಗ್ರುಪ್ 2ರಲ್ಲಿ ಸ್ಥಾನ ಪಡೆದಿರುವ ತಂಡಗಳಿಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಮುಂದಿನ ಸೆಮಿಫೈನಲ್ಗೆ ಅರ್ಹತೆ ಪಡೆಯಬೇಕಿದ್ದಲ್ಲಿ ಮುಂದಿನ ಮೂರು ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡವನ್ನು ಎದುರಿಸುತ್ತಿವೆ.
ನ್ಯೂಜಿಲೆಂಡ್ ತಂಡ 3 ಅಂಕಗಳನ್ನು ಸಂಪಾದಿಸಿದೆ. ಉಳಿದ ತಂಡಗಳು 2 ಅಂಕಗಳನ್ನು ಪಡೆದಿವೆ.ಇನ್ನು ಮುಂದಿನ ಮೂರುಪಂದ್ಯಗಳನ್ನು ನ್ಯೂಜಿಲೆಂಡ್ ಗೆದ್ದರೆ ಕೇನ್ ಪಡೆ 9 ಅಂಕಗಳೊಂದಿಗೆ ಸೆಮಿಫೈನಲ್ಗೆ ನೇರ ಅರ್ಹತೆ ಪಡೆಯಬಹುದು. ಉಳಿದ ತಂಡಗಳು 9 ಅಂಕ ಗಳಿಸಲು ಸಾಧ್ಯವಾಗದ ಕಾರಣ ನೆಟ್ ರನ್ ರೇಟ್ ಆಧಾರದ ಮೇಲೆ ಸೆಮಿಗೆ ಅರ್ಹತೆ ಪಡೆಯಬಹುದಾಗಿದೆ.