T20 World Cup- ಸೂರ್ಯ ಕುಮಾರ್ ಅವರ ಭರ್ಜರಿ ಅರ್ಧ ಶತಕದ ನೆರೆವಿನಿಂದ ಟೀಮ್ ಇಂಡಿಯಾ ನೆದರ್ಲೆಂಡ್ ವಿರುದ್ಧ ನಿರೀಕ್ಷೆಯಂತೆ 56 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಸತತ ಎರಡನೆ ಗೆಲುವು ದಾಖಲಿಸಿದೆ.
ಸಿಡ್ನಿ ಮೈದಾನದಲ್ಲಿ ನಡೆದ ಗ್ರೂಪ್ 2ರ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಕೆಲ ಹಾಕಿತು. ನೆದರ್ಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು.
ಟೀಮ್ ಇಂಡಿಯಾ ಓಪನರ್ ಕೆ.ಎಲ್.ರಾಹುಲ್ (9ರನ್) ವೈಫಲ್ಯ ಅನುಭವಿಸಿದರು. ರೋಹಿತ್ ಶರ್ಮಾ 53 ರನ್ (39 ಎಸೆತ, 4ಬೌಂಡರಿ, 3 ಸಿಕ್ಸರ್) ವಿರಾಟ್ ಕೊಹ್ಲಿ ಅಜೇಯ 62 ರನ್ (44 ಎಸೆತ, 3 ಬೌಂಡರಿ 2 ಸಿಕ್ಸರ್), ಸೂರ್ಯ ಕುಮಾರ್ ಅಜೇಯ 51 ರನ್ ( 25 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿದರು.
ನೆದರ್ ಲೆಂಡ್ ಪರ ಕ್ಲಾಸೆನ್ 33ಕ್ಕೆ 1, ಪೌಲ್ ವಾನ್ ಮೀಕೆರೆನ್ 32ಕ್ಕೆ 1 ವಿಕೆಟ್ ಪಡೆದರು.
180 ರನ್ ಗುರಿ ಬೆನ್ನತ್ತಿದ ನೆದರ್ಲೆಂಡ್ ಭಾರತೀಯ ಬೌಲರ್ಗಳ ಕರಾರುವಕ್ ದಾಳಿಗೆ ತತ್ತರಿಸಿ ಹೋಯ್ತು. ಮ್ಯಾಕ್ಸ್ ಒಡೌದ್ 16, ಬಾಸ್ ಡಿಲೀಡೆ 16, ಟಿಮ್ ಪ್ರಿಂಗಲ್ಸ್ 20ರನ್ ಹೊಡೆದು ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು.
ಭಾರತ ಪರ ಭುವನೇಶ್ವರ್ 9ಕ್ಕೆ 2, ಅಕ್ಸರ್ ಪಟೇಲ್ 18ಕ್ಕೆ 2, ಆರ್ಷದೀಪ್ 37ಕ್ಕೆ 2 ವಿಕೆಟ್ ಪಡೆದರು.