T20 World Cup ಪಂದ್ಯದಲ್ಲಿಂದು ಶ್ರೀಲಂಕಾ ತಂಡ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಮಹತ್ವದ ಪಂದ್ಯದಲ್ಲಿ ಸೆಣಸಲಿದೆ.
ಶನಿವಾರ ಸಿಡ್ನಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಶ್ರೀಲಂಕಾ ತಂಡ ಆಂಗ್ಲರಿಗೆ ಶಾಕ್ ಕೊಡಲು ನಿರ್ಧರಿಸಿದೆ. ಲಂಕಾ ತಂಡಕ್ಕೆ ಸೆಮಿಫೈನಲ್ಗೆ ಹೋಗಲು ಸಾಧ್ಯವಿಲ್ಲ ಎಂದು ಗೊತ್ತಾಗಿದ್ದು ಕೊನೆಯ ಪಂದ್ಯವನ್ನಾದರೂ ಗೆದ್ದು ತವರಿಗೆ ಮರಳಲು ಪ್ಲ್ಯಾನ್ ಮಾಡಿದೆ.
ಇತ್ತ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡಕ್ಕೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಇಂಗ್ಲೆಂಡ್ ಐರ್ಲೆಂಡ್ ವಿರುದ್ಧ ಸೋತಿದ್ದು ದೊಡ್ಡ ಪೆಟ್ಟು ನೀಡಿದೆ. ಆಸ್ಟ್ರೇಲಿಯಾಕ್ಕಿಂತ ನೆಟ್ ರನ್ ರೇಟ್ ಚೆನ್ನಾಗಿರುವುದು ಸೆಮಿಫೈನಲ್ ಹಾದಿ ಹತ್ತಿರವಿದ್ದಂತಿದೆ. ಇಂದಿನ ಪಂದ್ಯವನ್ನು ಗೆಲ್ಲುವುದು ಬಟ್ಲರ್ ಪಡೆಗೆ ಅನಿವಾರ್ಯವಾಗಿದೆ. ಇಂದು ಶ್ರೀಲಂಕಾ ವಿರುದ್ಧ ಗೆದ್ದರೆ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಲಿದೆ. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಮನೆಗೆ ಹೋಗಲಿದೆ.
2014ರ ನಂತರ ಟಿ20ಯಲ್ಲಿ ಶ್ರೀಲಂಕಾ ಇಂಗ್ಲೆಂಡ್ ವಿರುದ್ಧ ಗೆದ್ದಿಲ್ಲ. ಹೀಗಾಗಿ ಲಂಕಾ ವಿರುದ್ಧ ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಇಂಗ್ಲೆಂಡ್ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ತಂಡದ ಬ್ಯಾಟಿಂಗ್ ಶಕ್ತಿ ಈ ಟೂರ್ನಿಯಲ್ಲಿ ಗೊತ್ತಾಗಿದೆ. ಬೌಲಿಂಗ್ ವಿಭಾಗದಲ್ಲಿ ಸಾಮ್ ಕರನ್, ಮಾರ್ಕ್ ವುಡ್, ಹಾಗೂ ಬೆನ್ ಸ್ಟೋಕ್ಸ್ ತಾರಾ ಬೌಲರ್ಗಳಾಗಿದ್ದಾರೆ.