T20 World Cup SL vs NZ – ಟಿ20 ವಿಶ್ವಕಪ್‍ನಲ್ಲಿ ಇಂದು ಶ್ರೀಲಂಕಾ ತಂಡ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಶನಿವಾರ ಐತಿಹಾಸಿಕ ಸಿಡ್ನಿ ಮೈದಾನದಲ್ಲಿ ಗ್ರೂಪ್ 1ರ ಕದನದಲ್ಲಿ ದಸಾನು ಶನಕಾ ನೇತೃತ್ವದ ಶ್ರೀಲಂಕಾ ತಂಡ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ.
ಲಂಕಾ ತಂಡ ಸೂಪರ್ 12 ಹಂತದಲ್ಲಿ ಆಡಿದ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕಗಳೊಂದಿಗೆ ಐದನೆ ಸ್ಥಾನದಲ್ಲಿರುವ ಲಂಕಾ ತಂಡಕ್ಕೆ ಈ ಪಂದ್ಯವನ್ನು ಗೆದ್ದು ಅಂಕ ಹೆಚ್ಚಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ. ಏಷ್ಯಾನ್ ಚಾಂಪಿಯನ್ ತಂಡ ಮೊನ್ನೆ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.
ಲಂಕಾ ತಂಡಕ್ಕೆ ನ್ಯೂಜಿಲೆಂಡ್ ತಂಡವನ್ನು ಕಟ್ಟಿಹಾಕಲು ಸ್ಪಿನ್ ದೊಡ್ಡ ಅಸ್ತ್ರವಾಗಿದೆ. ಲಂಕಾ ಬ್ಯಾಟರ್‍ಗಳು ದೊಡ್ಡ ಇನ್ನಿಂಗ್ಸ್ ಕಟ್ಟಬೇಕಿದೆ.
ಮತ್ತೊಂದು ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ ಲಂಕಾ ವಿರುದ್ಧ ಗೆಲ್ಲುವ ನೆಚ್ಚಿನ ತಂಡವಾಗಿದೆ. ಬೌಲಿಂಗ್ ಬ್ಯಾಟಿಂಗ್ ಎರಡಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದೆ.
ಬೌಲಿಂಗ್‍ನಲ್ಲಿ ಟ್ರೆಂಟ್ ಬೌಲ್ಟ್ , ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್ ಎದುರಾಳಿ ಬ್ಯಾಟರ್‍ಗಳನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ತಾಕತ್ತು ಹೊಂದಿದ್ದಾರೆ. ಸ್ಪಿನ್ನರ ಮಿಚೆಲ್ ಸ್ಯಾಂಟ್ನರ್ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ.
ಇನ್ನು ಬ್ಯಾಟಿಂಗ್‍ನಲ್ಲಿ ಓಪನರ್ ಡೆವೊನ್ ಕಾನ್ವೆ ಒಳ್ಳೆಯ ಫಾರ್ಮ್‍ನಲ್ಲಿದ್ದರೆ.ನಾಯಕ ಕೇನ್ ವಿಲಿಯಮ್ಸನ್ ಹಾಗೂ ಮಾರ್ಟಿನ್ ಗಪ್ಟಿಲ್ ಸ್ಪೋಟಕ ಬ್ಯಾಟಿಂಗ್ ಮಾಡಿದರೆ ತಂಡ ದೊಡ್ಡ ಮೊತ್ತ ಕಲೆ ಹಾಕುವುದರಲ್ಲಿ ಅನುಮಾನವೇ ಇಲ್ಲ.