T20 World Cup ಟಿ20 ವಿಶ್ವಕಪ್ನಲ್ಲಿ ಅಮೋಘ ಪ್ರದರ್ಶನ ನೀಡತ್ತಿರುವ ಶ್ರೀಲಂಕಾ ತಂಡ ಸೂಪರ್ 12ಕ್ಕೆ ಪ್ರವೇಶ ನೀಡಿದೆ.
ಗಿಲಾಂಗ್ ಮೈದಾನದಲ್ಲಿ ನಡೆದ 9ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಕಲೆ ಹಾಕಿತು. ನೆದರ್ಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು.
ಶ್ರೀಲಂಕಾ ಪರ ಪಾಥುಮ್ ನಿಸ್ಸಂಕಾ 14 ರನ್ ಮತ್ತು ಕುಸಾಲ್ ಮೆಂಡೀಸ್ 79 ರನ್ (44 ಎಸೆತ 5 ಬೌಂಡರಿ, 5 ಸಿಕ್ಸರ್ ), ಧನಂಜಯ ಡಿಸಿಲ್ವಾ 0, ಚರಿತ್ ಅಸಲಂಕಾ 31, ಭಾನುಕಾ ರಾಜಪಕ್ಸ 19, ನಾಯಕ ಶನಕಾ 4, ವನಿಂದು ಹಸರಂಗ ಅಜೇಯ 5, ಚಾಮಿಕಾ ಕರುಣರತ್ನೆ ಅಜೇಯ 2 ರನ್ ಗಳಿಸಿದರು.
ನೆದರ್ಲೆಂಡ್ ಪರ ಪೌಲ್ ವಾನ್ ಮೀಕೆರೆನ್ 25ಕ್ಕೆ 2, ಬಾಸ್ ಡಿ ಲೀಡೆ 31ಕ್ಕೆ 2 ವಿಕೆಟ್ ಪಡೆದರು.
163 ರನ್ ಗುರಿ ಬೆನ್ನತ್ತಿದ ನೆದರ್ ಲೆಂಡ್ ಪರ ಮ್ಯಾಕ್ಸ್ ಒ ಡೌದ್ 71ರನ್ (53 ಎಸೆತ, 6 ಬೌಂಡರಿ, 3 ಸಿಕ್ಸರ್ ), ವಿಕ್ರಮ್ಜಿತ್ ಸಿಂಗ್ 7, ಬಾಸ್ ಡಿ ಲೀಡೆ 14, ಟಾಮ್ ಕೂಪರ್ 16, ನಾಯಕ ಸ್ಕಾಟ್ ಎಡ್ವರ್ಡ್ಸ್ 21 ರನ್ ಕಲೆ ಹಾಕಿದರು.
ಲಂಕಾ ಪರ ವನಿಂದು ಹಸರಂಗ 28ಕ್ಕೆ 3, ಮಹೇಶ್ ತೀಕ್ಷ್ಣ 32ಕ್ಕೆ 2, ಲಾಹಿರು ಕುಮಾರಾ 28ಕ್ಕೆ 1, ಬಿನುರಾ ಫೆರ್ನಾಡೊ 33ಕ್ಕೆ 1 ವಿಕೆಟ್ ಪಡೆದರು. ಕುಸಾಲ್ ಮೆಂಡೀಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.