ಸ್ಕಾಟ್ಲೆಂಡ್ ವಿರುದ್ಧ ಐರ್ಲೆಂಡ್ ತಂಡ ಗೆಲುವು ದಾಖಲಿಸಿದೆ. ಈ ಮೂಲಕ ಸೂಪರ್ 12 ಹಂತದ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಹೋಬಾರ್ಟ್ ಮೈದಾನದಲ್ಲಿ ಸ್ಕಾಟ್ ಲೆಂಡ್ ತಂಡ ನೀಡಿದ್ದ 177 ರನ್ ಗುರಿಯನ್ನು ಐರ್ಲೆಂಡ್ ತಂಡ 19 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿ ವಿಜಯಿಯಾಯಿತು. ಐರ್ಲೆಂಡ್ ತಂಡದ ಗೆಲುವಿನ ರುವಾರಿ ಕರ್ಟಿಸ್ ಕ್ಯಾಂಫರ್ ಹಾಗೂ ಜಾರ್ಜ್ ಡಾಕ್ರೆಲ್.
61 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜೊತೆಗೂಡಿದ ಈ ಜೋಡಿ ಸ್ಕಾಟ್ಲೆಂಡ್ ಬೌಲರ್ಗಳನ್ನು ಬೆಂಡೆತ್ತಿದರು. 119 ರನ್ಗಳ ಭರ್ಜರಿ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಜೊತೆಗೆ ಹಲವಾರು ದಾಖಲೆಗಳನ್ನು ಮುರಿದರು.
119 ರನ್ಗಳ ಜೊತೆಯಾಟ ಆಡುವ ಮೂಲಕ ಕರ್ಟಿಸ್ ಕ್ಯಾಂಫರ್ ಹಾಗೂ ಡಾಕ್ರೆಲ್ ಹೊಸ ದಾಖಲೆ ಬರೆದರು. ಟಿ20 ವಿಶ್ವಕಪ್ನಲ್ಲಿ ತಂಡದ ಪರ ಅತಿ ಹೆಚ್ಚು ಜೊತೆಯಾಟ ಆಡಿದ ಜೋಡಿ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು.
2014ರ ಟಿ20 ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ ವಿರುದ್ಧ ಪಾಯಿಂಟರ್ ಹಾಗೂ ಒಬ್ರಿಯಾನ್ 101 ರನ್ ಜೊತೆಯಾಟ ಈವರೆಗಿನ ದಾಖಲೆಯಾಗಿತ್ತು.
2014ರ ಟುರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ ಪೋರ್ಟರ್ಫೀಲ್ಡ್ ಹಾಗೂ ಸ್ಟಿರ್ಲಿಂಗ್ 80 ರನ್ ಜೊತೆಯಾಟ ಆಡಿದ್ದರು.
2014ರ ಟೂರ್ನಿಯಲ್ಲಿ ಯುಎಇ ವಿರುದ್ಧ ಫೊರ್ಟರ್ ಫೀಲ್ಡ್ ಹಾಗೂ ಜಾಯ್ಸ್ 80 ರನ್ ಜೊತೆಯಾಟ, 2021ರ ಟಿ20 ವಿಶ್ವಕಪ್ನಲ್ಲಿ ನಮೀಬಿಯಾ ವಿರುದ್ಧ ಸ್ಟಿರ್ಲಿಂಗ್ ಹಾಗೂ ಒಬ್ರಿಯಾನ್ 62 ರನ್ ಜೊತೆಯಾಟವಾಡಿದ್ದರು.