
ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಉಭಯ ತಂಡಗಳು ತಲಾ 1 ಅಂಕಗಳನ್ನು ಹಂಚಿಕೊಂಡಿವೆ.
ಹೋಬರ್ಟ್ ಮೈದಾನದಲ್ಲಿ ನಡೆದ ಗ್ರೂಪ್ 2ರ ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ಅಡ್ಡಿಯಾಯಿತು. ತಡವಾಗಿ ಆರಂಭವಾದ ಪಂದ್ಯಕ್ಕೆ 9ಓವರ್ ಗಳನ್ನು ನಿಗದಿ ಮಾಡಲಾಯಿತು.
ಟಾಸ್ ಗೆದ್ದ ಜಿಂಬಾಬ್ವೆ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 9 ಓವರ್ಗಳಲ್ಲಿ ಜಿಂಬಾಬ್ವೆ 5 ವಿಕೆಟ್ ನಷ್ಟಕ್ಕೆ 79 ರನ್ ಕಲೆ ಹಾಕಿತು. ಜಿಂಬಾಬ್ವೆ ಪರ ರೆಗಿಸ್ ಚಕಾಬ್ವಾ 8 ರನ್, ನಾಯಕ ಎರ್ವಿನ್ 2 ರನ್, ವೆಸ್ಲಿ ಮಾಧೆವೆರೆ ಅಜೇಯ 35 ರನ್, ಮಿಲ್ಟನ್ ಶುಂಭಾ 18 ರನ್ ಗಳಿಸಿದರು. ದ,ಆಫ್ರಿಕಾ ಪರ ಲುಂಗಿ ಎನ್ ಗಿಡಿ 20ಕ್ಕೆ 2 ವಿಕೆಟ್, ನೊರ್ಟ್ಜೆ ಹಾಗೂ ಪಾರ್ನೆಲ್ ತಲಾ 1 ವಿಕೆಟ್ ಪಡೆದರು.

64 ರನ್ ಗುರಿ ಬೆನ್ನತ್ತಿದ ದ,ಆಫ್ರಿಕಾ ತಂಡಕ್ಕೆ ಕ್ವಿಂಟಾನ್ ಡಿಕಾಕ್ ಅಜೇಯ 47 ರನ್ , ಟೆಂಬಾ ಬಾವುಮಾ ಅಜೇಯ 2ರನ್ ಕಲೆ ಹಾಕಿದರು. 3 ಓವರ್ಗಳಲ್ಲಿ 51 ರನ್ ಗಳಿಸಿತು ಮತ್ತೆ ಮಳೆ ಬಂದಿದ್ದರಿಂದ ಪಂದ್ಯವನ್ನು ರದ್ದು ಮಾಡಲಾಯಿತು.