T20 World Cup | ರಿಲಿ ರೊಸೊ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ದ.ಆಫ್ರಿಕಾ ಬಾಂಗ್ಲಾದೇಶ ವಿರುದ್ಧ 104 ರನ್ ಭರ್ಜರಿ ಗೆಲುವು ದಾಖಲಿಸಿದೆ.
ಸಿಡ್ನಿ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನ 24ನೇ ಪಂದ್ಯದಲ್ಲಿ ಟಾಸ್ ಗೆದ್ದ ದ.ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 205 ರನ್ ಕಲೆ ಹಾಕಿತು. ಬಾಂಗ್ಲಾದೇಶ 16.3 ಓವರ್ಗಳಲ್ಲಿ 101 ರನ್ ಗಳಿಗೆ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾ ಪರ ನಾಯಕ ಟೆಂಬಾ ಬಾವುಮಾ 2, ಕ್ವಿಂಟಾನ್ ಡಿಕಾಕ್ (63 ರನ್, 7 ಬೌಂಡರಿ, 3 ಸಿಕ್ಸರ್), ರಿಲೀ ರೊಸೊ 109 ರನ್ (77 ಎಸೆತದಲ್ಲಿ, 7 ಬೌಂಡರಿ 8 ಸಿಕ್ಸರ್) ಸ್ಪೋಟಕ ಬ್ಯಾಟಿಂಗ್ ಮಾಡಿ 33 ಎಸೆತದಲ್ಲಿ ಅರ್ಧ ಶತಕ ನಂತರ 52ನೇ ಎಸೆತದಲ್ಲಿ ಶತಕ ಸಿಡಿಸಿದರು. ಈ ಟೂರ್ನಿಯ ಮೊದಲ ಶತಕ ಇದಾಗಿದೆ.
ಟ್ರಿಸ್ಟನ್ ಸ್ಟಬ್ಸ್ 7, ಏಡಿನ್ ಮಾರ್ಕ್ರಮ್ 10, ಡೇವಿಡ್ ಮಿಲ್ಲರ್ ಅಜೇಯ 2 ರನ್ ಕಲೆ ಹಾಕಿದರು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 33ಕ್ಕೆ 2, ತಸ್ಕಿನ್ ಅಹ್ಮದ್ 46ಕ್ಕೆ 1,ಹಸನ್ ಮೊಹಮದ್ 36ಕ್ಕೆ 1, ಆಫಿಫ್ ಹುಸೇನ್ 11ಕ್ಕೆ 1 ವಿಕೆಟ್ ಪಡೆದರು.
206 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶ ವೇಗಿ ನೊರ್ಟ್ಜೆ ದಾಳಿಗೆ ತತ್ತರಿಸಿ ಹೋಯಿತು.
ನಜ್ಮುಲ್ ಹೊಸೇನ್ 9, ಸೌಮ್ಯ ಸರ್ಕಾರ್ 15, ಲಿಟನ್ ದಾಸ್ 34, ಶಕೀಬ್ ಅಲ್ ಹಸನ್ 1, ಆಫಿಫ್ ಹೊಸೇನ್ 1, ಮೆಹದಿ ಹಸನ್ 11 ರನ್ ಗಳಿಸಿದರು.
ದ.ಆಫ್ರಿಕಾ ಪರ ನೊರ್ಟ್ಜೆ 10ಕ್ಕೆ 4 ವಿಕೆಟ್ ಪಡದರು. ಶಂಶಿ 20ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ರಿಲಿ ರೊಸೊ ಪಂದಯ್ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.