ಟಿ20 ವಿಶ್ವಕಪ್ನಲ್ಲಿ ಎರಡು ಬಾರಿ ಚಾಂಪಿಯನ್ ವೆಸ್ಟ್ಇಂಡೀಸ್ ಟೂರ್ನಿಯಿಂದ ಬೇಗೆನ ನಿರ್ಗಮಿಸಿದ ಪರಿಣಾಮ ತಂಡದ ಮುಖ್ಯ ಕೋಚ್ ಫಿಲ್ ಸಿಮಾನ್ಸ್ ಅವರ ತಲೆದಂಡವಾಗಿದೆ.
ಹೆಡ್ ಕೋಚ್ ಫಿಲ್ ಸಿಮಾನ್ಸ್ ತಮ್ಮ ಹುದ್ದೆಗೆ ಕೆಳಗಿಳಿಯಲಿದ್ದಾರೆ ಎಂದು ವೆಸ್ಟ್ಇಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ.
ನ.30ರಿಂದ ಡಿ12ರವರೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಫಿಲ್ ಸಿಮನ್ಸ್ ಅವರ ಕೊನೆಯ ಟೆಸ್ಟ್ ಸರಣಿ ಆಗಿದೆ.
ಮೊನ್ನೆ ವೆಸ್ಟ್ ಇಂಡೀಸ್ ಟಿ20 ವಿಶ್ವಕಪನಲ್ಲಿ ಕಳಪೆ ಆಟವಾಡಿ ಮೊದಲ ಸುತ್ತಿನಲ್ಲೆ ನಿರ್ಗಮಿಸಿತ್ತು. ಬಿ ಗುಂಪಿನಲ್ಲಿ ನಾಲ್ಕನೆ ಸ್ಥಾನ ಪಡೆದಿತ್ತು.
2016ರಲ್ಲಿ ವಿಂಡೀಸ್ ಟಿ20 ವಿಶ್ವಕಪ್ ಗೆದ್ದಾಗ ಸಿಮನ್ಸ್ ತಂಡದ ಕೋಚ್ ಆಗಿದ್ದರು.ಇಂಗ್ಲೆಂಡ್ ವಿರುದ್ದ 1-0 ಐತಿಹಾಸಿಕ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಟಿ20 ವಿಶ್ವಕಪ್ನ ಸೋಲು ಬರೀ ತಂಡಕ್ಕೆ ಮಾತ್ರವಲ್ಲ ದೇಶಕ್ಕೂ ನೋವಾಗಿದೆ. ತುಂಬ ನಿರಾಸೆಯಾಗಿದೆ.ನಾವು ಒಳ್ಳೆಯ ಪ್ರದರ್ಶನ ನೀಡಲಿಲ್ಲ. ಇನ್ನು ನಮ್ಮ ಅನುಪಸ್ಥಿತಿಯಲ್ಲಿ ತಂಡ ಆಡಲಿದೆ. ನಾನು ಅಭಿಮಾನಿಗಳ ಕ್ಷಮೆಯನ್ನು ಕೇಳುತ್ತೇನೆ ಎಂದು ಸಿಮಾನ್ಸ್ ಹೇಳಿದ್ದಾರೆ.