ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅನಿರೀಕ್ಷಿತಾ ಫಲಿತಾಂಶಗಳು ಬಂದಿವೆ.
ಈ ಫಲಿತಾಂಶಗಳು ದೊಡ್ಡ ದೊಡ್ಡ ತಂಡಗಳ ಲೆಕ್ಕಾಚಾರಗಳನ್ನು ಬುಡಮೇಲೂ ಮಾಡಿವೆ. ನಮೀಬಿಯಾ ಏಷ್ಯಾ ಚಾಂಪಿಯನ್ ಶ್ರೀಲಂಕಾ ತಂಡವನ್ನು ಸೋಲಿಸಿತು. ನಂತರ ಐರ್ಲೆಂಡ್ ಎರಡು ಬಾರಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತು.
ಇನ್ನು ಸೂಪರ್ 12ನಲ್ಲಿ ಆಂಗ್ಲರು ಐರ್ಲೆಂಡ್ ವಿರುದ್ಧ ಡಕ್ ವರ್ತ್ ನಿಯಮದಡಿ 5 ರನ್ ಗಳಿಂದ ಸೋಲು ಕಂಡರು. ಇದೀಗ ಪಾಕಿಸ್ತಾನ ಕ್ರಿಕೆಟ್ ಶಿಶು ಜಿಂಬಾಬ್ವೆ ವಿರುದ್ಧ ಸೋತು ಭಾರೀ ಮುಖಭಂಗ ಅನುಭವಿಸಿದೆ.
ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಕೊನೆಯ ಎಸೆತದಲ್ಲಿ ಸೋತಿತ್ತು. ಇದೀಗ ಜಿಂಬಾಬ್ವೆ ವಿರುದ್ಧ ಕಡಿಮೆ ಮೊತ್ತವನ್ನು ಚೇಸ್ ಮಾಡಲಾಗದೇ ಕೊನೆಯ ಎಸೆತದಲ್ಲಿ ಯಡವಟ್ಟು ಮಾಡಿಕೊಂಡಿದೆ.
ಬಾಬರ್ ಅಜಂ ಪಡೆಗೆ ಈ ಪಂದ್ಯ ಬಹಳ ಮಹತ್ವದಾಗಿತ್ತು. ಸೆಮಿಫೈನಲ್ಗೆ ಹೋಗುವುದು ಬಹುತೇಕ ಅಸಾಧ್ಯವೆಂಬಂತಾಗಿದೆ. ಆದರೂ ಕೆಲವು ಲೆಕ್ಕಾಚಾರಗಳ ಪ್ರಕಾರ ಪಾಕ್ ತಂಡಕ್ಕೆ ಸೆಮಿಫಯನಲ್ಗೆ ಹೋಗಲು ದಾರಿಯಿದೆ ಎಂದು ಹೇಳಲಾಗುತ್ತಿದೆ.
ಆಡಿರುವ 2 ಪಂದ್ಯಗಳನ್ನು ಕೈಚೆಲ್ಲಿರುವ ಪಾಕಿಸ್ತಾನಕ್ಕೆ 3 ಪಂದ್ಯಗಳು ಬಾಕಿ ಇವೆ. ಪಾಕ್ ಮುಂದೆ ಬಾಂಗ್ಲಾದೇಶ, ನೆದರ್ಲೆಂಡ್ ಹಾಗೂ ಸೌತ್ ಆಫ್ರಿಕಾ ವಿರುದ್ಧ ಸೆಣಸಲಿದೆ. ಈ ಮೂರು ಪಂದ್ಯಗಳನ್ನು ಗೆಲ್ಲಬೇಕು. ಗೆಲ್ಲುವುದು ಮಾತ್ರವಲ್ಲ ಭಾರೀ ಅಂತರಿದಿಂದ ಗೆಲ್ಲಬೇಕು. ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕು.
ಮುಖ್ಯವಾಗಿ ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧ ಸೋಲ ಬೇಕು. ಉಳಿದ ಎರಡು ಪಂದ್ಯಗಳಲ್ಲಿ ಸೌತ್ ಆಫ್ರಿಕಾ ಸೋಲಬೇಕು ಅಥವಾ ಒಂದು ಪಂದ್ಯ ರದ್ದಾದರೂ ಪಾಕ್ ಸೆಮಿಫೈನಲ್ಗೆ ಹೋಗಲಿದೆ.ಎರಡನೆ ಸ್ಥಾನಕ್ಕೇರಿ ಸೆಮಿಗೇರಬಹುದಾಗಿದೆ.